ಪಂಚಮಸಾಲಿಗೆ 2ಎ ಮೀಸಲಾತಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಬಳಿ ವಾದ ಮಂಡನೆ: ದಾಖಲಾತಿ ಹಸ್ತಾಂತರಿಸಿದ ವಚನಾನಂದ ಶ್ರೀ

ವಚನಾನಂದ ಶ್ರೀ
ಬೆಂಗಳೂರು : ಇಲ್ಲಿನ ದೇವರಾಜ ಅರಸು ಭವನದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ.ಕೆ.ಜಯಪ್ರಕಾಶ ಹೆಗ್ಗಡೆಯವರು ಮತ್ತು ಸದಸ್ಯರುಗಳ ಮುಂದೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವನ್ನು ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ 2ಎ ದಲ್ಲಿ ಸೇರ್ಪಡೆಗೊಳಿಸಲು ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮೀಜಿ ಹಾಗೂ ವಕೀಲರಾದ ಬಿ.ಎಸ್.ಪಾಟೀಲ ಅವರು ವಾದ ಮಂಡಿಸಿ ಹೆಚ್ಚುವರಿ ದಾಖಲಾತಿಗಳನ್ನು ಹಸ್ತಾಂತರಿಸಿದರು.