ಅರ್ಹ ಫಲಾನುಭವಿಗಳಿಗೆ ವಸತಿ ಮತ್ತು ನಿವೇಶನ ನೀಡುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ.

ಜಗಳೂರು: ಸರ್ಕಾರದ ವಿವಿಧ ವಸತಿ ಯೋಜನೆ ಅಡಿ ಅರ್ಹ ಫಲಾನುಭವಿಗಳಿಗೆ ವಸತಿ ಮತ್ತು ನಿವೇಶನ ನೀಡುವಂತೆ ಆಗ್ರಹಿಸಿ ಜಗಳೂರು ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಪಟ್ಟಣ ಪಂಚಾಯತಿ ಕಚೇರಿ ಎದುರು ಪ್ರತಿಭಟಿಸಿ ಪಟ್ಟಣ ಪಂಚಾಯತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ ಹಾಗೂ ಮುಖ್ಯಧಿಕಾರಿ ಲೋಕ್ಯನಾಯಕ್ ಅವರಿಗೆ ಮನವಿ ಸಲ್ಲಿಸಿದರು ಬಳಿಕ ತಾಲೂಕು ಕಚೇರಿ ತೆರಳಿ ತಹಾಶಿಲ್ದಾರ್ ನಾಗವೇಣಿ ಅವರಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಕರವೇ ಅಧ್ಯಕ್ಷ ತಾಲೂಕು ಅಧ್ಯಕ್ಷ ಎಂ ವೈ ಮಹಾಂತೇಶ್ ಮಾತನಾಡಿದ ಅವರು ಕರ್ನಾಟಕದಲ್ಲಿಯೇ ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಬರಪೀಡಿತ ತಾಲೂಕಿನಲ್ಲಿ ಜಗಳೂರು ಎರಡನೇ ಸ್ಥಾನದಲ್ಲಿದೆ. ಯಾವುದೇ ನದಿಮೂಲ ಜಲಮೂಲ ಗಳಿಲ್ಲದ ಯಾವುದೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಗಳಿಲ್ಲದ ಅತ್ಯಂತ ನತದೃಷ್ಟ ತಾಲೂಕು ಎಂದರೆ ತಪ್ಪಾಗಲಾರದು. ಇಂತಹ ತಾಲೂಕಿನಲ್ಲಿ ಸರಾಸರಿ ಶೇಕಡ ಎಪ್ಪತ್ತಕ್ಕೂ ಹೆಚ್ಚು ಬಡ ಹಾಗೂ ಮಧ್ಯಮವರ್ಗದ ಜನಗಳೇ ವಾಸಿಸುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅರ್ಹ ಫಲಾನುಭವಿಗಳಿಗೆ ವಸತಿ ಹಾಗೂ ನಿವೇಶನ ದೊರೆಯದೆ ಬದುಕು ಅತಂತ್ರ ಎಂಬುವಂತೆ ಆಗಿದೆ ಹೀಗಾಗಿ ತಾಲೂಕಿನ ಅರ್ಹ ಫಲಾನುಭವಿಗಳಿಗೆ ಆದಷ್ಟು ಬೇಗ ಸರ್ಕಾರದ ವಸತಿ ಯೋಜನೆಯಡಿ ವಸತಿಯ ಮತ್ತು ನಿವೇಶನವನ್ನು ನೀಡಬೇಕೆಂದು ಆಗ್ರಹಿಸಿದ್ದರೆ.
ಈ ಸಂದರ್ಭದಲ್ಲಿ ಕ.ರ.ವೇ ಗೌರವ ಅಧ್ಯಕ್ಷ ಸುರೇಶ್ ಸಂಗೊಳ್ಳಿ, ಕಾರ್ಯದರ್ಶಿ ಹರ್ಷ , ಕರವೇ ಕಾನೂನು ಸಲಹೆಗಾರ ವಕೀಲ ಆರ್ ಓಬಳೇಶ್ , ವಿದ್ಯಾರ್ಥಿ ಘಟಕದ ಅಧ್ಯಕ್ಷ ಎಂ.ಡಿ. ಅಬ್ದುಲ್ ರಖೀಬ್ , ಜಗಳೂರು ಗೊಲ್ಲರಹಟ್ಟಿ ಗ್ರಾಮ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷ ರೇಖಾ ಶಂಭುಲಿಂಗಪ್ಪ, ಗೌರವ ಅಧ್ಯಕ್ಷೆ ತಿಪಮ್ಮ , ಉಪಾಧ್ಯಕ್ಷ ಶಾಹೀನ ಬೇಗಂ , ಕಾರ್ಯದರ್ಶಿ ವಾಣಿ , ಸಂಘಟನಾ ಕಾರ್ಯದರ್ಶಿ ಚಂಪಾವತಿ, ಪದಾಧಿಕಾರಿಗಳಾದ ವೇದಾವತಿ , ಮಂಜುಳಮ್ಮ, ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 
                         
                       
                       
                       
                       
                       
                       
                      