ಬೆಂಗಳೂರಿನಲ್ಲಿ ಸೇನಾ ದಿನಾಚರಣೆ; ಜ.16ರ ಕಾರ್ಯಕ್ರಮಗಳ ಆಕರ್ಷಣೆ ಹೇಗಿರುತ್ತೆ ಗೊತ್ತಾ‌..?

ಬೆಂಗಳೂರು: ಈ ಬಾರಿ ಬೆಂಗಳೂರಿನಲ್ಲಿ ಸೇನಾ ದಿನದ ವಿಶೇಷ ಕಾರ್ಯಕ್ರಮ ಗಮನಸೆಳೆಯಲಿದೆ. ಈ‌ ಸಂದರ್ಭದಲ್ಲಿ ಸೇನಾ ಶಕ್ತಿ ಅನಾವರಣಗೊಳ್ಳಲಿದೆ. ಅದಕ್ಕಾಗಿ ಭರ್ಜರಿ ತಾಲೀಮು ನಡೆದಿದೆ.

ಬೆಂಗಳೂರಿನಲ್ಲಿ ಸೇನಾ ದಿನದ ಪಥಸಂಚಲನ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಕರ್ನಾಟಕ ಮತ್ತು ಕೇರಳ ಉಪವಲಯದ ಜಿಒಸಿ, ಮೇಜರ್ ಜನರಲ್ ರವಿ ಮುರುಗನ್, ಭಾರತೀಯ ಸೇನೆಯು 2023ರ ಜನವರಿ 15ರಂದು ಬೆಂಗಳೂರಿನಲ್ಲಿ ತನ್ನ 75ನೇ ಸೇನಾ ದಿನವನ್ನು ಆಚರಿಸುತ್ತಿದೆ. ರಾಷ್ಟ್ರದ ರಾಜಧಾನಿ ಪ್ರದೇಶದಿಂದ ದೇಶದ ಎಲ್ಲ ಪ್ರಮುಖ ಸ್ಥಳಗಳಿಗೆ ಕಾರ್ಯಕ್ರಮಗಳನ್ನು ಕೊಂಡೊಯ್ಯುವ ಭಾರತ ಸರ್ಕಾರದ ಉಪಕ್ರಮದ ಭಾಗವಾಗಿ ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ರಾಷ್ಟ್ರದ ರಾಜಧಾನಿಯಿಂದ ಹೊರಗೆ ನಡೆಸಲಾಗುತ್ತಿದೆ. ಇದರಿಂದ ಈ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಜನರಿಗೆ ತಿಳಿಯುತ್ತದೆ ಮತ್ತು ಸ್ಥಳೀಯ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳಲು ಕಾರಣವಾಗುತ್ತದೆ ಎಂದರು.

ಸೇನಾ ದಿನದ ಪರೇಡ್ ಅನ್ನು ಅತ್ಯಂತ ವೇಗಕ್ಕೆ ಹೆಸರಾದ ಸೇನಾ ವಿಮಾನಗಳಾದ ಧ್ರುವ್ ಮತ್ತು ರುದ್ರ ಹೆಲಿಕಾಪ್ಟರ್‌ಗಳು ಬೆಂಬಲಿಸುತ್ತದೆ. ಅಲ್ಲದೆ, ಭಾರತೀಯ ಸೇನೆಯ ಶಸ್ತ್ರಾಗಾರದಲ್ಲಿರುವ ವಿವಿಧ ಶಸ್ತ್ರಾಸ್ತ್ರ ವ್ಯವಸ್ಥೆಗಳು, ಕೆ9 ವಜ್ರ ಸ್ವಯಂ ಚಾಲಿತ ಬಂದೂಕುಗಳು, ಪಿನಾಕಾ ರಾಕೆಟ್‌ಗಳು, ಟಿ -90 ಟ್ಯಾಂಕರ್ ಗಳು, ಬಿಎಂಪಿ -2 ಇನ್‌ಫಾಂಟ್ರಿ ಸಮರ ವಾಹನ, ತುಂಗಸ್ಕ ಏರ್ ಡಿಫೆನ್ಸ್ ಸಿಸ್ಟಂ, 155 ಎಂಎಂ ಬೋಫೋರ್ಸ್ ಗನ್‌ಗಳು, ಲಕ್ಷ್ಯ ಕೇಂದ್ರಿತ ದಾಳಿ ವಾಹನಗಳು, ಸ್ವಾತಿ ರಾಡಾರ್ ಮತ್ತು ವಿವಿಧ ಆಕ್ರಮಣಕಾರಿ ವಿಧಾನಗಳ ಪ್ರದರ್ಶನ ಗಮನಸೆಳೆಯಲಿದೆ.

1949 ರಲ್ಲಿ ಕೊನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಆಗಿದ್ದ ಜನರಲ್ ಸರ್ ಫ್ರಾನ್ಸಿಸ್ ರಾಯ್ ಬುಚೆರ್ ಅವರಿಂದ (ನಂತರ ಫೀಲ್ಡ್ ಮಾರ್ಷಲ್) ಜನರಲ್ ಕೆ.ಎಂ ಕಾರ್ಯಪ್ಪ ಭಾರತೀಯ ಸೇನೆಯ ಕಮಾಂಡರ್ ಸ್ಥಾನವನ್ನು ಅಲಂಕರಿಸಿ ಸ್ವಾತಂತ್ರ್ಯಾನಂತರದ ಮೊದಲ ಭಾರತೀಯ ಕಮಾಂಡರ್-ಇನ್-ಚೀಫ್ ಆದ ಸಂದರ್ಭದ ನೆನಪಿಗಾಗಿ ಪ್ರತಿ ವರ್ಷ ಜನವರಿ 15 ಅನ್ನು ‘ಸೇನಾ ದಿನ’ ವನ್ನಾಗಿ ಆಚರಿಸಲಾಗುತ್ತದೆ ಎಂದವರು ವಿವರಿಸಿದರು.

ಸೇನಾದಿನದ ಪರೇಡ್, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ನ ಯುದ್ದ ಸ್ಮಾರಕದಲ್ಲಿ ಕರ್ತವ್ಯದಲ್ಲಿದ್ದಾಗ ಪ್ರಾಣತ್ಯಾಗ ಮಾಡಿದ ಎಲ್ಲ ಹುತಾತ್ಮ ಸೇನಾ ಸಿಬ್ಬಂದಿಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಪಿವಿಎಸ್‌ಎಂ, ಎವಿಎಸ್‌ಎಂ, ವಿಎಸ್‌ಎಂ, ಎಡಿಸಿ ಅವರಿಂದ ಪುಷ್ಪನಮನ ಸಲ್ಲಿಸುವ ಕಾರ್ಯಕ್ರಮದಿಂದ ಆರಂಭವಾಗುತ್ತದೆ.
ಸೇನಾ ಸಿಬ್ಬಂದಿ ಮುಖ್ಯಸ್ಥರು ನಂತರ ಬೆಂಗಳೂರು ಪರೇಡ್ ಮೈದಾನ, ಎಂಇಜಿ & ಸೆಂಟರ್ ನಲ್ಲಿ ಸೇನಾ ದಿನದ ಪರೇಡ್ ವೀಕ್ಷಿಸುವರು ಮತ್ತು ಶೌರ್ಯ ಮತ್ತು ತ್ಯಾಗದ ಪ್ರದರ್ಶಿಸಿದ ಸಿಬ್ಬಂದಿಗಳಿಗೆ ವೈಯಕ್ತಿಕ ಶೌರ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡುವರು. ಅಲ್ಲದೆ, ಸಕ್ರಿಯ ಕಾರ್ಯಾಚರಣೆಗಳ ವೇಳೆ ಅಸಾಧಾರಣ ಕಾರ್ಯಕ್ಷಮತೆ ತೋರಿದ ಘಟಕಗಳಿಗೆ ಪ್ರಶಂಸಾ ಪ್ರತ್ರಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

    ಈ ವರ್ಷದ ಸೇನಾ ದಿನದ ಪರೇಡ್ ಎಂಟು ಕವಾಯತು ನಡಿಗೆಗೆ ಸಾಕ್ಷಿಯಾಗಲಿದೆ, ಇದರಲ್ಲಿ ಆರ್ಮಿ ಸರ್ವಿಸ್ ಕಾರ್ಪ್ಸ್‌ನಿಂದ ಕುದುರೆ ಏರಿದ ತುಕಡಿ ಮತ್ತು ಐದು ರೆಜಿಮೆಂಟಲ್ ಬ್ರಾಸ್ ಬ್ಯಾಂಡ್‌ಗಳನ್ನು ಒಳಗೊಂಡಿರುವ ಮಿಲಿಟರಿ ಬ್ಯಾಂಡ್ ಸೇರಿದೆ. ಈ ಪ್ರತಿಯೊಂದು ತುಕಡಿಗಳು ಅದ್ಭುತ ಇತಿಹಾಸ ಮತ್ತು ವಿಶಿಷ್ಟ ಸಂಪ್ರದಾಯಗಳೊಂದಿಗೆ ತಮ್ಮ ರೆಜಿಮೆಂಟ್‌ಗಳನ್ನು ಪ್ರತಿನಿಧಿಸುತ್ತವೆ ಎಂದು ಅವರು ತಿಳಿಸಿದರು.

ನಾಗರಿಕರಿಗೆ ಈ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವ ಉದ್ದೇಶಿತ ಉದ್ದೇಶವನ್ನು ಪೂರೈಸಲು, ಸೇನೆಯ ಬಗ್ಗೆ ಮತ್ತು ಸೇನಾ ದಿನದ ಮಹತ್ವವನ್ನು ಹೆಚ್ಚಿಸಲು ನಾವು ಸಾಮಾನ್ಯ ಜನರನ್ನು ತಲುಪುತ್ತಿದ್ದೇವೆ. ಶಾಲಾ ವಿದ್ಯಾರ್ಥಿಗಳು (ವಿಶೇಷವಾಗಿ ಸರ್ಕಾರಿ ಶಾಲೆಗಳು), ಕಾಲೇಜುಗಳು, ಎನ್‌ಸಿಸಿ ಅಭ್ಯರ್ಥಿಗಳು, ಅನಾಥಾಶ್ರಮಗಳ ಮಕ್ಕಳು ಸೇರಿದಂತೆ ಎಲ್ಲಾ ವರ್ಗದ ಜನರನ್ನು  ಆಹ್ವಾನಿಸಲಾಗಿದೆ.

ಈವರೆಗೆ 8000ಕ್ಕೂ ಅಧಿಕ ಸ್ಥಳೀಯ ನಾಗರಿಕರು ಕಾರ್ಯಕ್ರಮದ ಪೂರ್ವಭಾವಿ ಪ್ರದರ್ಶನಗಳಲ್ಲಿ ಪಥಸಂಚಲನವನ್ನು ವೀಕ್ಷಿಸಿದ್ದಾರೆ. ನಾವು ಇದನ್ನು ಪ್ರಮುಖ ಸಾಧನೆಯೆಂದು ಪರಿಗಣಿಸುತ್ತೇವೆ. ಪಥಸಂಚಲನದ ಜತೆಗೆ, ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಲು 2023ರ ಜನವರಿ 14 ರಂದು ಚಹಾಕೂಟ ಸೇರಿದಂತೆ ಇತರ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ, ಇದರಲ್ಲಿ ಭಾಗವಹಿಸಲು ಕರ್ನಾಟಕ ರಾಜ್ಯಪಾಲರು ಮುಖ್ಯ ಅತಿಥಿಯಾಗಲು ಒಪ್ಪಿಗೆ ನೀಡಿದ್ದಾರೆ. ಮತ್ತು 2023ರ ಜನವರಿ 15ರ ಸಂಜೆ ಮಿಲಿಟರಿ ಟ್ಯಾಟೂ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮೇಜರ್ ಜನರಲ್ ರವಿ ಮುರುಗನ್‌ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!