ದರೋಡೆ ಪ್ರಕರಣದಲ್ಲಿ ಆರೋಪಿತರ ಬಂಧನ.! 9.66 ಲಕ್ಷ ಮೌಲ್ಯದ ಸೋತ್ತು ವಶಕ್ಕೆ ಪಡೆದ ಪೊಲೀಸ್

ದಾವಣಗೆರೆ: ದಿನಾಂಕ 17/12/2022 ರಂದು ಸಿದ್ದೇಗೌಡ ಹೆಚ್.ಎಂ, ಪಿ.ಐ. ಹೊನ್ನಾಳಿ ಠಾಣೆ ಹಾಗು ನ್ಯಾಮತಿ ಠಾಣೆಯ ಪಿಎಸ್‌ಐ ಮತ್ತು ನ್ಯಾಮತಿ ಪೊಲೀಸ್ ಠಾಣೆಯ ಸಿಬ್ಬಂದಿಯವರು ಅಪರಾಧ ತಡೆ ಮಾಸಚರಣೆಯ ಪ್ರಯುಕ್ತ ಸವಳಂಗ ಸರ್ಕಲ್ ಬಳಿ ರಸ್ತೆಯಲ್ಲಿ ಹೋಗಿಬರುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಬೆಳಗ್ಗೆ ಸಮಯದಲ್ಲಿ ಶಿಕಾರಿಪುರ ಕಡೆಯಿಂದ ಒಂದು ಬುಲೆರೊ ಪಿಕ್ ಅಪ್ ಗೂಡ್ಸ್ ವಾಹನದಲ್ಲಿ ಐದು ಜನ ಅಸಾಮಿಗಳು ಕುಳಿತುಕೊಂಡು ಬರುತ್ತಿದ್ದವರು ನಮ್ಮನ್ನು ನೋಡಿ ಒಮ್ಮೆಲೆ ತಮ್ಮ ವಾಹನವನ್ನು ತಿರುಗಿಸಿಕೊಂಡು ವಾಪಸ್ಸು ಹೋಗಲು ಪ್ರಯತ್ನಿಸಿದವರನ್ನು ಸಿದ್ದೇಗೌಡ ಹೆಚ್.ಎಂ, ಪಿ.ಐ. ಮತ್ತು ಪಿಎಸ್‌ಐ ಹಾಗು ಸಿಬ್ಬಂದಿಯವರು ಸುತ್ತುವರೆದು ಸದರಿ ವಾಹನವನ್ನು ತಡೆದು ಅದರಲ್ಲಿದ್ದ ಅಸಾಮಿಗಳನ್ನು ಹಿಡಿದುಕೊಂಡು, ನಂತರ ವಾಹನವನ್ನು ಪರಿಶೀಲಿಸಿ ನೋಡಲಾಗಿ ಕೆಎ-68/2405 ನೊಂದಣಿ ಸಂಖ್ಯೆಯ ವಾಹನವಾಗಿದ್ದು, ಸದರಿ ವಾಹನವು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದಾಖಲಾಗಿದ್ದ ಗುನ್ನೆ ನಂಬರ್: 167/2022. ಕಲಂ 395. 342 ಐಪಿಸಿ ಪ್ರಕರಣದಲ್ಲಿ ದರೋಡೆ ಮಾಡಿಕೊಂಡು ಹೋಗಿರುವ ವಾಹನವಾಗಿದ್ದಿತು.
ನಂತರ ಸದರಿ ಅಸಾಮಿಗಳ ಹೆಸರು ವಿಳಾಸ ಕೆಳಲಾಗಿ ಶಕೀಲ್ ಅಹಮ್ಮದ್, 27 ವರ್ಷ, ಡ್ರೈವರ್/ಕೂಲಿಕೆಲಸ, ವಾಸ ಹಳೇಮಸಿದಿ ಕೇರಿ, ಆಶಯ ಬಡಾವಣೆ, ಶಿಕಾರಿಪುರ ಟೌನ್, 2) ಫೈರೋಜ್, 20 ವರ್ಷ, ಗಾರೆಕೆಲಸ, ಡ್ರೈವರ್ ಕೆಲಸ, ವಾಸ, ಚನ್ನಕೇಶ್ವರ ನಗರ, 7ನೇ ಕ್ರಾಸ್, ಶಿಕಾರಿಪುರ ಟೌನ್, 3) ಇಮಾನ್ ಷರೀಪ್ @ ಕೀಲಿ ಇಮಾನ್ , 35 ವರ್ಷ, ಡ್ರೈವರ್ ಕೆಲಸ, ವಾಸ 1ನೇ ಕ್ರಾಸ್, ಟಿಪ್ಪುನಗರ, ಶಿವಮೊಗ್ಗ ಟೌನ್, ಹಾಲಿವಾಸ ಆಶಯ ಬಡಾವಣೆ, ಶಿಕಾರಿಪುರ ಟೌನ್, 4) ಸೈಯದ್ ಸಾಧೀಕ್, 23 ವರ್ಷ, ಗಾರೆ ಕೆಲಸ, ವಾಸ 12ನೇ ಕ್ರಾಸ್, ಆಶ್ರಯ ಬಡಾವಣೆ, ಶಿಕಾರಿಪುರ ಟೌನ್, 5) ವಾಸೀಂ, 19 ವರ್ಷ, ಮುಸ್ಲಿಂ ಜನಾಂಗ, ಗಾರೆಕೆಲಸ, ವಾಸ ಆಶ್ರಯ ಬಡಾವಣೆ, ಶಿಕಾರಿಪುರ ಟೌನ್ ಅಂತ ತಿಳಿಸಿದ ಮೇರೆಗೆ ಮಾನ್ಯ ಪೊಲೀಸ್ ಉಪಾಧೀಕ್ಷಕರವರಾದ ಡಾ.ಸಂತೋಷ್ ಕೆ.ಎಂ, ಚನ್ನಗಿರಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ 1] ಕೆಎ-68 2405 ನೇ ಮಹೀಂದ್ರಾ ಬುಲೆರೋ ಪಿಕಪ್ ವಾಹನ, ಅದರ ಅಂದಾಜು ಬೆಲೆ 7,38,000/- ರೂಗಳಷ್ಟು ಆಗಿರುತ್ತದೆ. 2] ಕೆಎ-15 ಇಎಫ್-6686 ನೇ ಹೊಂಡ ಕಂಪನಿಯ `ಡಿಯೋ ಸ್ಕೂಟಿ ವಾಹನ ಅದರ ಅಂದಾಜು ಬೆಲೆ 40,000/- ರೂ ಮತ್ತು 3] ಕೆಎ-I5 ಇಎಫ್-1393 ನೇ ಸುಜುಕಿ ಕಂಪನಿಯ ಆಕ್ಸ್‌ಸ್ ಸ್ಕೂಟಿ ವಾಹನ ಅದರ ಅಂದಾಜು ಬೆಲೆ 40,000/- ರೂ ಆಗಿದ್ದು ಹಾಗೂ 1,48,000/- ರೂ ಹಣ ಆರೋಪಿತರುಗಳಿಂದ ವಶಕ್ಕೆ ಪಡೆದಿದ್ದು ಒಟ್ಟು ಮೌಲ್ಯ ಸುಮಾರು 9,66,000/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರವರಾದ ಸಿದ್ದೇಗೌಡ ಹೆಚ್.ಎಂ, ಪಿ ಐ, ಹೊನ್ನಾಳಿ ಠಾಣೆ, ನ್ಯಾಮತಿ ಠಾಣೆಯ ಪಿಎಸ್‌ಐ ರಮೇಶ್ ಪಿ.ಎಸ್. ಸಿಬ್ಬಂದಿಯವರಾದ ರವಿನಾಯಕ, ಉಮೇಶ, ಮಂಜಪ್ಪ, ಲಕ್ಷಣ್, ದೇವರಾಜ್. ಮಹೇಶನಾಯ್ಕ, ತಿಮ್ಮರಾಜು,ಕೆ.ಆರ್. ಜಗಧೀಶ ಚಂದ್ರಶೇಖರ್, ಮಂಜಪ್ಪ ರವರುಗಳು ಭಾಗವಹಿಸಿದ್ದು, ಇವರುಗಳನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀ ಸಿ.ಬಿ ರಿಷ್ಯಂತ್ ಐಪಿಎಸ್ ದಾವಣಗೆರೆ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಶ್ರೀ ಆರ್.ಬಿ. ಬಸರಗಿ ರವರು ಶ್ಲಾಘಿಸಿರುತ್ತಾರೆ.