Fake: ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪಿತರ ಬಂಧನ, 3,75,400/- ರೂ ಮೌಲ್ಯದ ಖೋಟಾ ನೋಟುಗಳು ವಶ

IMG-20250723-WA0022

ದಾವಣಗೆರೆ: (Fake) ದಾವಣಗೆರೆ ಜಿಲ್ಲೆಯಲ್ಲಿ 19-07-2025 ರಂದು ಚಿರಡೋಣಿ ಗ್ರಾಮದ ಸಪ್ತಗಿರಿ ಬಾರ್ ಅಂಡ್ ರೆಸ್ಟೋರೆಂಟ್ ಎದುರಿನ ರಸ್ತೆಯಲ್ಲಿ ಯಾರೋ ಇಬ್ಬರು ಖೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: 120/2025 ಕಲಂ 318(4), 179, 180, ರೆವಿ 3(5) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ನಂತರ ಸದರಿ ಪ್ರಕರಣದಲ್ಲಿ ದಾಳಿ ನಡೆಸುವ ಸಂಬಂಧ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಜಿ ಮಂಜುನಾಥ ರವರ & ಸಹಾಯಕ ಪೊಲೀಸ್ ಅಧಿಕ್ಷಕರು, ಚನ್ನಗಿರಿ ಉಪ ವಿಭಾಗರವರಾದ ಶ್ರೀ ಸ್ಯಾಮ್ ವರ್ಗೀಸ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಸಂತೆಬೆನ್ನೂರು ವೃತ್ತ ನಿರೀಕ್ಷಕರಾದ ಶ್ರೀ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಇಮ್ತಿಯಾಜ್ ಹಾಗು ಸಿಬ್ಬಂಧಿಯವರನ್ನು ಒಳಗೊಂಡ ತಂಡವನ್ನು ರಚಿಸಲಾಗಿತ್ತು.

ಅದರಂತೆ ಸದರಿ ತಂಡದವರು ಚಿರಡೋಣಿ ಗ್ರಾಮದ ಚಿರ ಶಾಂತಿವನದ ಸ್ಮಶಾನ ಹತ್ತೀರ ದೊಡ್ಡಘಟ್ಟ ರಸ್ತೆಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನಿಸುತ್ತಿದ್ದವರ ಮೇಲೆ ದಾಳಿ ಮಾಡಿ, ಕಾನೂನು ಬಾಹಿರವಾಗಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪಿತರಾದ ಎ-01 ಸಂತೋಷಕುಮಾರ ತಂದೆ ತುಳಚ್ಯಾನಾಯ್ಡ್ 32 ವರ್ಷ, ನಡುವಿನ ತಾಂಡ, ಹೂವಿನ ಹಡಗಲಿ ತಾಲ್ಲೂಕು, ಎ-02 ವಿರೇಶ ಬಿ.ಪಿ ತಂದೆ ರಾಮಪ್ಪ, 37 ವರ್ಷ, ವಾಸ ಬೇವೂರು ಗ್ರಾಮ, ಕೊಟ್ಟೂರು ತಾಲ್ಲೂಕು ರವರುಗಳನ್ನು ದಸ್ತಗಿರಿ ಮಾಡಿದ್ದು, ಸದರಿಯವರ ಬಳಿ ಇದ್ದ 500/- ರೂ ಮುಖ ಬೆಲೆಯ 2 ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ಹಾಗು ಕೃತ್ಯಕ್ಕೆ ಬಳಸಿದ ಕೆಎ-27 ಕ್ಯೂ 1629 ನೇ ಮೋಟಾರ್ ಸೈಕಲ್ ಅನ್ನು ವಶ ಪಡೆಸಿಕೊಳ್ಳಲಾಯಿತು.

ಆರೋಪಗಳು ನೀಡಿದ ಮಾಹಿತಿಯ ಮೇರೆಗೆ ಕಬ್ಬಳ ಗ್ರಾಮದ ಕರೆಕಟ್ಟೆ ರಸ್ತೆಯಲ್ಲಿದ್ದ ಎ-03 ಕುಬೇರಪ್ಪ ತಂದೆ ದೊಂಗ್ರಪ್ಪ, 60 ವರ್ಷ, ಕುಕ್ಕವಾಡ ಗ್ರಾಮ, ದಾವಣಗೆರೆ ತಾಲ್ಲೂಕು ಎ-04 ಹನುಮಂತಪ್ಪ ತಂದೆ ವಿರುಪಾಕ್ಷಪ್ಪ, 75 ವರ್ಷ, ಬೇವೂರು ಗ್ರಾಮ, ಕೊಟ್ಟೂರು ತಾಲ್ಲೂಕು ರವರುಗಳ ಮೇಲೆ ದಾಳಿ ಮಾಡಿ ಸದರಿಯವರ ಬಳಿ ಇದ್ದ 500/- ರೂ ಮುಖ ಬೆಲೆಯ 28 ಸಾವಿರ ಮೌಲ್ಯದ ಹಾಗು 200/- ರೂ ಮುಖ ಬೆಲೆಯ 47,400/- ರೂ ಮೌಲ್ಯದ ಖೋಟಾ ನೋಟುಗಳನ್ನು ವಶ ಪಡಿಸಿಕೊಂಡು ಎ-03 ಆರೋಪಿತನು ಕುಕ್ಕವಾಡ ಗ್ರಾಮದ ತನ್ನ ಮನೆಯಲ್ಲಿಟ್ಟಿದ್ದ 500/- ರೂ ಮುಖ ಬೆಲೆಯ 1 ಲಕ್ಷ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದು ಪ್ರಕರಣದಲ್ಲಿ ಮೇಲ್ಕಂಡ 4 ಜನ ಆರೋಪಿತರಿಂದ 500/-ಹಾಗು 200/- ರೂ ಮುಖ ಬೆಲೆಯ ಒಟ್ಟು 3,75,400/- ರೂ ಮೌಲ್ಯದ ಖೋಟಾ ನೋಟುಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.

ಆರೋಪಿತರ ಹಿನ್ನೇಲೆ: ಆರೋಪಿತ ಎ-03 ಕುಬೇರಪ್ಪ ಈತನ ಮೇಲೆ ದಾವಣಗೆರೆ ಜಿಲ್ಲೆಯ ಹರಿಹರ ನಗಹರದಲ್ಲಿ 01 ಪ್ರಕರಣ, ವಿಜಯನಗರ ಜಿಲ್ಲೆಯ ಹೊಸಪೇಟೆ ನರ ಠಾಣೆಯಲ್ಲಿ 01 ಪ್ರಕರಣ, ಮೈಸೂರು ಜಿಲ್ಲೆಯಲ್ಲಿ 01 ಪ್ರಕರಣ ಒಟ್ಟು 03 ಖೋಟಾನೋಟು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ

ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾದ ಸಂತೆಬೆನ್ನೂರು ವೃತ್ತ ನಿರೀಕ್ಷಕರಾದ ಶ್ರೀ.ಲಿಂಗನಗೌಡ ನೆಗಳೂರು, ಬಸವಾಪಟ್ಟಣ ಠಾಣೆಯ ಶ್ರೀ ಇಮ್ಮಿಯಾಜ್, ಪಿ.ಎಸ್.ಐ (ಕಾಹಿಸು), ಶ್ರೀಮತಿ ಭಾರತಿ ಜೆ.ಇ, ಮ.ಪಿ.ಎಸ್.ಐ (ತನಿಖೆ) ಸಿಬ್ಬಂದಿಯವರಾದ ರಂಗನಾಥ, ಶಂಕರಗೌಡ, ಬಸವರಾಜ್, ಬಾಲಾಜಿ, ಇಬ್ರಾಹಿಂ, ಅಣ್ಣೇಶ, ಮೋಹನ್, ಅಂಜಿನಪ್ಪ, ಪ್ರಕಾಶ್, ಎಂ.ಎಂ. ಖಾನ್, ತಿಮ್ಮರಾಜು, ವೆಂಕಟೇಶ್ ಹಾಗೂ ಇರ್ಷಾದ್ ಇವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ. ಉಮಾ ಪ್ರಶಾಂತ್ ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

error: Content is protected !!