ದೃಶ್ಯಕಲಾ ಕಾಲೇಜಿನಿಂದ ಚಿತ್ರಕಲಾ ಸ್ಪರ್ಧೆ; ಗಮನ ಸೇಳೆದ ಕಲಾವಿದರ ಪ್ರಾತ್ಯಕ್ಷತೆ

ದಾವಣಗೆರೆ; ಯೂನಿವರ್ಸಿಟಿ ಕಾಲೇಜ್ ಅಫ್ ವಿಜುವಲ್ ಆರ್ಟ್ಸ್ ಅಲುಮ್ನಿ ಅಸೋಸಿಯೇಷನ್ (ರಿ) ವತಿಯಿಂದ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ 60 ವರ್ಷಗಳ ವಜ್ರಮಹೋತ್ಸವ ಸಂಭ್ರಮ ಪ್ರಯುಕ್ತಚಿತ್ರಕಲಾ ಸ್ಪರ್ಧೆ ಹಾಗೂ ಯುಕೊವಾ ಕಲಾವಿದರಿಂದ ಮಕ್ಕಳಿಗೆ ಪ್ರಾತ್ಯಕ್ಷತೆಯನ್ನು ತಾಲ್ಲೂಕಿನ ಅಣಬೇರು ಗ್ರಾಮದ ಕನಕ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೈರಾಜ್ ಚಿಕ್ಕಪಾಟೀಲ್ ನೆರವೇರಿಸಿದರು.
ನಂತರ ಮಾತನಾಡಿದ ಅವರು ಶಾಲೆಯ ಮಕ್ಕಳ ಪ್ರತಿಭೆಯ ಬಗ್ಗೆ ವರ್ಣನೆ ಮಾಡುವುದರ ಮುಖಾಂತರ ಮತ್ತು ಇಂತಹ ಕಾರ್ಯಕ್ರಮಕ್ಕೆ ಶಾಲೆಯ ಪ್ರೋತ್ಸಾಹಿಸಿದ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಇಂತಹ ಚಟುವಟಿಕೆಗಳು ನಿರಂತರ ಶಾಲೆಗಳಲ್ಲಿ ಸಂಘಟಿಸುತ್ತಾ ಇದ್ದರೆ ಹಲವಾರು ಪ್ರತಿಭೆಗಳು ಇಂಥ ಕ್ಷೇತ್ರದಲ್ಲಿ ಸಾಧನೆ ಮಾಡಲು ಪ್ರೋತ್ಸಾಹಿಸಿದಂತೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಮೊಹಮ್ಮದ್ ಇರ್‌ಫಾನ್ ಜಿ. ಎಸ್. ಕಾರ್ಯಕ್ರಮವನ್ನು ಶಾಲೆಯಲ್ಲಿ ನಡೆಸುತ್ತಿರುವ ಬಗ್ಗೆ ಮತ್ತು ಸಂಘಟಿಸಿದ ದೃಶ್ಯ ಕಲಾ ಕಾಲೇಜಿನ ಹಳೆಯ ವಿದ್ಯಾರ್ಥಿಗಳಿಗೆ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಚಿತ್ರ ಕಲಾವಿದರಾದ ಶ್ರೀನಾಥ್ ಬಿದ್ರೆ ಉಪಸ್ಥಿತರಿದ್ದರು.ಅಧ್ಯಕ್ಷತೆ ವಹಿಸಿಕೊಂಡ ಕುಮಾರ್ ವೈ ಶಿಲ್ಪ ಕಲಾವಿದರು ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಚಿತ್ರಕಲಾ ಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲಿ ಈ ರೀತಿಯ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಮ್ಮ ದೃಶ್ಯ ಕಲಾ ಕಾಲೇಜು 60ನೇ ವರ್ಷದ ವಜ್ರ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿಭಿನ್ನವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತ ಚಿತ್ರಕಲಾ ಕ್ಷೇತ್ರದ ಮಹತ್ವದ ಬಗ್ಗೆ ತಿಳಿಸುವ ಕೆಲಸವನ್ನು ಮಾಡುತ್ತಾ ಬರುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸಂತೋಷ್ ಕುಲಕರ್ಣಿ ಕನಕ ಸೆಂಟ್ರಲ್ ಸ್ಕೂಲ್ ಶಾಲೆಯ ವರ್ಣ ಚಿತ್ರವನ್ನು ಚಿತ್ರಿಸಿ ಶಾಲೆಗೆ ಕೊಡುಗೆ ಕೊಟ್ಟರು. ಯುಕೊವಾ ಕಲಾವಿದರಾದ. ಚಂದ್ರಶೇಖರ್ ಎಸ್ ಸಂಗಾ, ಚಿತ್ರಕಲಾವಿದರು. ಸುಲಭ ಚಿತ್ರ ರಚನೆ ವಿಧಾನದಲ್ಲಿ ಮಕ್ಕಳಿಗೆ ಹಂತ ಹಂತವಾಗಿ ನೇರವಾಗಿ ಚಿತ್ರರಚನೆ ಮಾಡುವ ಮೂಲಕ ತೋರಿಸಿದರು.
ಪ್ರಶಾಂತ ಎನ್., ಶಿಲ್ಪ ಕಲಾವಿದರು ಮಣ್ಣಿನಲ್ಲಿ ಮೂರ್ತಿ ರಚನೆಯನ್ನು ವಿವಿಧ ರೀತಿಯಲ್ಲಿ ತಯಾರಿಸಲು ಸರಳ ವಿಧಾನದಲ್ಲಿ ಮಕ್ಕಳಿಗೆ ತೋರಿಸುವ ಮೂಲಕ ಪ್ರಾತ್ಯಕ್ಷತೆ ನೀಡಿದರು. ನಂತರ ಎಲ್ಲಾ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಚಿತ್ರ ರಚನೆಯನ್ನು ಮಾಡಿದರು ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ವಿದ್ಯಾರ್ಥಿಗಳು ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ, ದೃಶ್ಯ ಕಲಾ ಕಾಲೇಜಿನ ಯುಕೊವಾ ಕಲಾವಿದರು ಉಪಸ್ಥಿತರಿದ್ದರು.