ಚಿತ್ರಕಲೆ ಮೂಲಕ ಮತದಾನ ಜಾಗೃತಿ ಮೂಡಿಸಿರುವ ಕಲಾವಿದ ರವೀಂದ್ರ ಅರಳಗುಪ್ಪಿ ಕುಟುಂಬ

ದಾವಣಗೆರೆ: ನಗರದ ಬಿಐಇಟಿ ರಸ್ತೆಯಲ್ಲಿ ಚಿತ್ರಕಲೆ ಮೂಲಕ ಮತದಾನ ಜಾಗೃತಿ ಮೂಡಿಸುತ್ತಿರುವ ಕಲಾವಿದ ರವೀಂದ್ರ ಅರಳಗುಪ್ಪಿ ಮತ್ತು ಕುಟುಂಬ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಜಾಗೃತಿಗಾಗಿ ಚುನಾವಣಾ ಆಯೋಗ ನೂರಾರು ಕೋಟಿ ರು ವೆಚ್ಚ ಮಾಡುತ್ತಿದೆ. ಆದರೆ ನಗರದ ಚಿತ್ರಕಲಾವಿದ, ರಂಗಕರ್ಮಿ ರವೀಂದ್ರ ಅರಳಗುಪ್ಪಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಚಿತ್ರ ಬರಹಗಳ ಮೂಲಕ ಮತದಾನ ಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.
ದಾವಣಗೆರೆ ನಗರದ ಬಿಐಇಟಿ ರಸ್ತೆಯಲ್ಲಿರುವ ‘ಸಂಕಲನ ಚಿತ್ರ ಕುಟೀರ’ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಂಗಳವಾರ ಮತ್ತು ಬುಧವಾರ ಅವರ ಮತದಾನ ಜಾಗೃತಿ ಬರಹ ಮತ್ತು ಚಿತ್ರಗಳು ನೋಡಲು ಸಿಗುತ್ತವೆ. ಬಳಸಿದ ವಸ್ತುಗಳನ್ನು ಉಪಯೋಗಿಸಿಕೊಂಡು ಮತದಾನ ಸ್ಲೋಗನ್‌ಗಳನ್ನು ಚಿತ್ರ ಸಹಿತ ವಿವರಿಸಿದ್ದಾರೆ.
ಹಳೆಯ ದಿನಪತ್ರಿಕೆಗಳನ್ನು ಬಳಸಿ ದಾವಣಗೆರೆಗೆ ಪ್ರಸಿದ್ಧಿ ಮಂಡಕ್ಕಿ ಮಿಣಸಿನ ಕಾಯಿಯನ್ನು ಸುತ್ತಿಕೊಡುವ ಪ್ರತಿಬಿಂಬದ ರೀತಿಯಾಗಿ ಸುರುಳಿಯಾಗಿ ಸುತ್ತಿ ಸೆಲ್ಫಿ ಕಾರ್ನರ್ ನಿರ್ಮಾಣ ಮಾಡಿರುವುದು ಅತ್ಯಂತ ಆಕರ್ಷವಾಗಿ ಮೂಡಿಬಂದಿದೆ.
ರವೀಮದ್ರ ಅರಳಗುಪ್ಪಿ ಅವರಿಗೆ ಪತ್ನಿ ಉಷಾ ಮತ್ತು ಮಗಳು ಇಂಪನ ಅವರ ಸಹಕಾರು ಇದೆ ಇಂದು ಈ ಸೆಲ್ಫಿ ಕಾರ್ನರ್‌ನಲ್ಲಿ ಹೆಬ್ಬೆರಳು ತೋರಿಸುವ ಮೂಲಕ ನಾನು ನಾಳಿನ ಮತದಾನಕ್ಕೆ ಸಿದ್ಧನಿದ್ದೇನೆ ಎನ್ನುವ ಪ್ರತಿಜ್ಞೆ ಮಾಡುವುದು ಮತ್ತು ನಾಳೆ ಮತದಾನ ಮಾಡಿದ ನಂತರ ಇದೇ ಸೆಲ್ಫಿ ಕಾರ್ನರ್‌ನಲ್ಲಿ ತೋರು ಬೆರಳಿಗೆ ಹಾಕಿರುವ ಶಾಯಿಯನ್ನು ತೋರಿಸುವುದು ಈ ಕಾರ್ನರ್ ನಿರ್ಮಾಣದ ಉದ್ದೇಶವಾಗಿದೆ ಎನ್ನುತ್ತಾರೆ ಕಲಾವಿದ ರವೀಂದ್ರ ಅರಳಗುಪ್ಪಿ.