ಆರ್ಯ-ಈಡಿಗ ಸಮಾಜಕ್ಕೆ ಮೀಸಲಾತಿಗೆ ಪ್ರಣವಾನಂದ ಶ್ರೀ ಒತ್ತಾಯ ಜು.25ಕ್ಕೆ ಗಂಗಾವತಿಯ ಹೇಮಕೂಟದಲ್ಲಿ ಸಭೆ

IMG-20210707-WA0006

 

ದಾವಣಗೆರೆ.ಜು.೭ : ರಾಜ್ಯದಲ್ಲಿ ಆರ್ಯ ಈಡಿಗ ನಿಗಮ ಮಂಡಳಿಯನ್ನು ಸ್ಥಾಪಿಸುವ ಮೂಲಕ ಸಮಾಜವನ್ನು ಎಸ್ಸಿ ಅಥವಾ ಎಸ್ಟಿಗೆ ಸೇರಿಸುವಂತೆ ಒತ್ತಾಯಿಸಿ ಇದೇ 25ರಂದು ಗಂಗಾವತಿ ಯಲ್ಲಿ ರಾಜ್ಯಮಟ್ಟದ ಚಿಂತನ ಮಂಥನ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಆರ್ಯ ಈಡಿಗ ಸಮಾಜದ ಸ್ವಾಮಿಗಳಾದ ಪ್ರಣವಾನಂದ ಸ್ವಾಮಿಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಂಗಾವತಿ ಹೇಮಕೂಟ ಶ್ರೀಕ್ಷೇತ್ರದಲ್ಲಿ ಅಂದು ಬೆಳಗ್ಗೆ 10 ಕ್ಕೆ ಚಿಂತನ ಚಿಂತನ ಮಂಥನ ಸಭೆ ನಡೆಯಲಿದ್ದು , ರಾಜ್ಯದ ಹಲವಾರು ಗಣ್ಯರು ಆಗಮಿಸಲಿದ್ದಾರೆ. ಮಾಲೀಕಯ್ಯ ಗುತ್ತೇದಾರ್ ಹಾಗೂ ಶ್ರೀನಾಥ್ ದಣಿ ಇವರ ನೇತೃತ್ವದಲ್ಲಿ 4ಸಾವಿರಕ್ಕೂ ಹೆಚ್ಚು ಗಣ್ಯರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಆರ್ಯ ಈಡಿಗ ಸಮಾಜದಲ್ಲಿ 26 ಒಳಪಂಗಡಗಳಿದ್ದು 80ಲಕ್ಷಕ್ಕೂ ಹೆಚ್ಚು ಜನ ರಾಜ್ಯದಲ್ಲಿದ್ದಾರೆ. ಆದರೆ ಅವರೆಲ್ಲರೂ ಈಗ ಕೆಲಸವಿಲ್ಲದೆ ಬೀದಿ ಪಾಲಾಗಿದ್ದಾರೆ ಈ ಬಗ್ಗೆ ಸರ್ಕಾರ ಗಮನ ಹರಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಾರಾಯಿ ಸೇಂದಿ ನಿಷೇಧ ಆದ ನಂತರ ಬಹುತೇಕ ಜನರು ಬೇರೆ ಬೇರೆ ಕೆಲಸಗಳಿಗೆ ಹೋಗುತ್ತಿದ್ದು ಅವರಿಗೆ ಯಾವುದೇ ವ್ಯವಸಾಯ ಭೂಮಿ ಮನೆಗಳು ಇಲ್ಲದಂತಾಗಿವೆ. ಕಾರಣ ರಾಜ್ಯ ಸರ್ಕಾರದ ವಶದಲ್ಲಿರುವ ಈಚಲ ವನಪ್ರದೇಶಗಳನ್ನು ವ್ಯವಸಾಯಕ್ಕಾಗಿ ಆರ್ಯ ಈಡಿಗ ಈಡಿಗ ಸಮಾಜಕ್ಕೆ ನೀಡಬೇಕು. ಅಲ್ಲದೆ ಬ್ರಹ್ಮಶ್ರೀ ಆರ್ಯ ಈಡಿಗ ನಿಗಮವನ್ನು ಸ್ಥಾಪಿಸಬೇಕು‌. ಜತೆಗೆ ಸಮಾಜವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಜನರ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಕುರಿತಂತೆ ಈಗಾಗಲೇ ಜಿಲ್ಲಾವಾರು ಸಭೆ ನಡೆಸಲಾಗಿದ್ದು ಇದೀಗ ದಾವಣಗೆರೆಯಲ್ಲಿ ಸಭೆ ನಡೆಸಲಾಗುತ್ತಿದೆ. ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಗುವುದು. ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ನಮ್ಮದೇ ಸಮಾಜದ 7ಜನ ಶಾಸಕರಿದ್ದರೂ ಸಹ ಸಮಾಜಕ್ಕೆ ನ್ಯಾಯ ಸಮ್ಮತವಾದ ಸೌಲಭ್ಯಗಳು ಸಿಗಲಿಲ್ಲ ಈ ಹಿನ್ನೆಲೆಯಲ್ಲಿ ಜುಲೈ 25 ರಂದು ಗಂಗಾವತಿ ಜಿಲ್ಲೆಯ ಶ್ರೀ ಹೇಮಕೂಟ ಶ್ರೀಕ್ಷೇತ್ರದ ದೇವಸ್ಥಾನದಲ್ಲಿ ರಾಜ್ಯದ ಎಲ್ಲಾ ಮುಖಂಡರ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕೆಲಸವಿಲ್ಲದೆ ನಿರಾಶ್ರಿತರಾಗಿರುವ ನಮ್ಮ ಸಮಾಜದ ಬಗ್ಗೆ ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ಮುಂಬರುವ 2023ರ ಚುನಾವಣೆಯಲ್ಲಿ ನಮ್ಮದೇ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದ ಅವರು, ರಾಜ್ಯದಲ್ಲಿ ಇರುವ ಎಂಎಸ್ ಐಎಲ್ ಗಳ ಹೋಲ್ ಸೆಲ್ ಗಳಲ್ಲಿ ನಮ್ಮದೇ ಸಮಾಜದ ಯುವಕರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡ ಮಲ್ಲೇಶ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!