ಎಥನಾಲ್ ಘಟಕದ ಕಟ್ಟಡ ಪಿಲ್ಲರ್ ಕುಸಿತ, 03 ಜನ ಕಾರ್ಮಿಕರ ಸಾವು, 5 ಜನ ಚಿಂತಾಜನಕ

IMG-20211104-WA0206

ದಾವಣಗೆರೆ:- ಎಥನಾಲ್ ಘಟಕ ನಿರ್ಮಿಸುತ್ತಿದ್ದ ಸಮಯದಲ್ಲಿ ಕಟ್ಟಡದ ಪಿಲ್ಲರ್ ಕುಸಿದು 03 ಜನ ಸಾವನಪ್ಪಿರುವ ಘಟನೆ ದಾವಣಗೆರೆ ತಾಲ್ಲೂಕಿನಲ್ಲಿ ನಡೆದಿದೆ.

5 ಜನ ಕಾರ್ಮಿಕರು ಗಾಯಗೊಂಡಿದ್ದು ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ಶಾಮನೂರು ಸಕ್ಕರೆ ಕಾರ್ಖಾನೆಯಲ್ಲಿ ಇಂದು ಘಟನೆ ಸಂಭವಿಸಿದೆ. ಕುಕ್ಕವಾಡ ಶುಗರ್ಸ್ ಕಾರ್ಖಾನೆಯ ಪಕ್ಕದಲ್ಲೇ ಎಥನಾಲ್ ಘಟಕ ನಿರ್ಮಿಸುತ್ತಿದ್ದ ಸಮಯದಲ್ಲಿ ಕಟ್ಟಡದ ಪಿಲ್ಲರ್ ಕುಸಿದ ಪರಿಣಾಮ ಹದಿನೈದು ಜನ ಕಾರ್ಮಿಕರಿದ್ದರು, ಅದರಲ್ಲಿ ಮೂವರು ಜನ ಕೊನೆಯುಸಿರೆಳೆದಿದ್ದಾರೆ.

ಸಾವನಪ್ಪಿದವರನ್ನು ರಾಯಚೂರು ಹಾಗು ಕೊಪ್ಪಳ ಹಾಗು ಪಶ್ಚಿಮ ಬಂಗಾಳದ ಭಾಗದವರೆಂದು ತಿಳಿದುಬಂದಿದೆ. ಮೃತರನ್ನು ಮಾನಪ್ಪ, ಬಸವರಾಜಪ್ಪ, ಮಜೀದ್ ಎಂದು ತಿಳಿದುಬಂದಿದ್ದು, ಇನ್ನು ನೂತನ ಎಥನಾಲ್ ಘಟಕ ನಿರ್ಮಿಸುತ್ತಿದ್ದ ಸಮಯದಲ್ಲಿ ಕಾಂಕ್ರೀಟು ಹಾಕುವ ವೇಳೆ ಈ ಅವಘಡ ಸಂಭವಿಸಿದೆ.

ಮಾಜಿ ಸಚಿವ ಹಾಗು ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ ಕುಟುಂಬದ ಒಡೆತನದ ಸಕ್ಕರೆ ಕಾರ್ಖಾನೆಯಾಗಿದ್ದು,
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ತುರ್ತು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚಿಕಿತ್ಸೆಗಾಗಿ
ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು,

ಐದು ಜನ ಕಾರ್ಮಿಕರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಹದಡಿ ಪೊಲೀಸ್ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಲಂ 304(ಎ) ಅಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!