ATM ಎಟಿಎಂ ಎಂದರೆ ಎನಿ ಟೈಮ್ ಮನಿ.! ಆದ್ರೆ ಇಲ್ಲಿ ಸಂಜೆಯಾದ್ರೆ ಬೀಗ ಜಡಿಯುವ ಸಿಬ್ಬಂದಿ.!

ದಾವಣಗೆರೆ: ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ Banking Service ಬದಲಾವಣೆ ಬಂದು ಗ್ರಾಹಕರಿಗೆ Customers ಅನುಕೂಲವಾಗಲಿ ಹಾಗೂ ಅವರಿಗೆ ಸದಾ ಸೇವೆ ನೀಡಬೇಕು ಎಂಬ ಕಾರಣಕ್ಕೆ ಎಟಿಎಂ ಗಳನ್ನು ಪ್ರಾರಂಭಿಸಲಾಯಿತು. ಎಟಿಎಂ ಎಂದರೆ ಎನಿ ಟೈಮ್ ಮನಿ Any Time Money ಎಂದು ಗ್ರಾಹಕರು ದಿನದ 24 ಗಂಟೆಯಲ್ಲಿ ಯಾವಾಗಬೇಕಾದರೂ ಹಣ ಪಡೆಯಬಹುದು ಎಂಬ ಕಾರಣಕ್ಕೆ ಈ ವ್ಯವಸ್ಥೆ ಪ್ರಾರಂಭಿಸಲಾಗಿತ್ತು.
ಇದಕ್ಕೆ ಅಪವಾದವೆಂಬಂತೆ ದಾವಣಗೆರೆಯ ಮಂಡಿಪೇಟೆಯ ಕೆನರಾ ಬ್ಯಾಂಕ್ ಬ್ರಾಂಚ್ ಮುಂಭಾಗವಿರುವ ಕೆನರಾ ಬ್ಯಾಂಕ್ ಎಟಿಎಂ ಗೆ ಸಂಜೆಯಾಯಿತೆಂದರೆ Mandipete Canara Bank Branck ATM Key ಬೀಗ ಜಡಿಯಲಾಗುತ್ತದೆ, ಗ್ರಾಹಕರು ಹಣ ಪಡೆಯಲು ಎಟಿಎಂ ಮುಂಬಾಗ ಬಂದಾಗ ಎಟಿಎಂ ಒಳಗಡೆ ದೀಪ ಉರಿಯುತ್ತಿದ್ದರೆ, ಮುಂಭಾಗದ ಬಾಗಿಲಿಗೆ ಮಾತ್ರ ಬೀಗ ಬಿದ್ದಿರುತ್ತದೆ ಗ್ರಾಹಕರು ಹಿಡಿ ಶಾಪ ಹಾಕುತ್ತಾ ತೆರಳುತ್ತಿರುವುದು ಮಾತ್ರ ಸಾಮಾನ್ಯವಾಗಿದೆ.
ಸಂಜೆ ಎಟಿಎಂಗೆ ಬೀಗ ಹಾಕುತ್ತಿದ್ದು ಬ್ಯಾಂಕ್ ಸಿಬ್ಬಂದಿ ಮಹಾವೀರ್ ಎಂಬುವವರಿಗೆ ಗ್ರಾಹಕರೊಬ್ಬರು ಆಸ್ಪತ್ರೆಗೆ ಹಣ ಕಟ್ಟಲು ಹೋಗಬೇಕು ದಯಮಾಡಿ ಬೀಗ ತೆಗೆಯಿರಿ ಎಂದಾಗ, ತಾವು ಪ್ರತಿದಿನ ಇದಕ್ಕೂ ಮುನ್ನ ಬೀಗ ಹಾಕುತ್ತೇವೆ, ಇಂದು ಸ್ವಲ್ಪ ಲೇಟಾಗಿದೆ ಅಷ್ಟೇ ಎಂಬ ಉಡಾಫೆ ಉತ್ತರ ನೀಡುವ ಮೂಲಕ ಪಲಾಯನ ಮಾಡಿದ್ದು ಮಾತ್ರ ಬೇಸರವಾಯಿತು.
ಸಂಬಂಧಪಟ್ಟ ಬ್ಯಾಂಕ್ ನ ಮೇಲಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ, ಗ್ರಾಹಕರಿಗೆ ದಿನದ 24 ಗಂಟೆಗಳ ಕಾಲ ಎಟಿಎಂ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ.
*ಕೆ.ಎಲ್.ಹರೀಶ್ ಬಸಾಪುರ.*
garudavoice21@gmail.com 9740365719