ಹರಿಹರ ಶಾಸಕ ಬಿ.ಪಿ ಹರೀಶ್ ವಿರುದ್ದ ಅಟ್ರಾಸಿಟಿ ಕೇಸ್ ದಾಖಲು

ದಾವಣಗೆರೆ: ಹರಿಹರ ಶಾಸಕ ಪಿ.ಪಿ. ಹರೀಶ್ ಅವರು ಎಸ್‌ಸಿ ಸಮುದಾಯದ ಬಗ್ಗೆ ಅವಹೇಳನವಾಗಿ ಮಾತನಾಡಿರುವ ಹಿನ್ನೆಲೆಯಲ್ಲಿ ಅಟ್ರಾಸಿಟಿ ದೂರು ದಾಖಲಾಗಿದೆ.
ಬಿ.ಪಿ ಹರೀಶ್ ಅವರ ಮೇಲೆ ಹರಿಹರ ನಗರ ಠಾಣೆ ಯಲ್ಲಿ ಗುನ್ನೆ ನಂಬರ್ 83/2023, ಕಲಂ 504 ಐಪಿಸಿ ಹಾಗೂ ಕಲಂ 3(1)(o), 3(1)(r) SC ST PA act 1989 ರೀತ್ಯಾ ಪ್ರಕರಣ ದಾಖಲಿಸಲಾಗಿದೆ.
ಹರೀಶ್ ಅವರು ಎಸ್.ಸಿ ಸಮುದಾಯದ ಬಗ್ಗೆ ಅವಹೇಳನ ವಾಗಿ ಮತಾಡಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಬಂದಿದ್ದು, ಅದನ್ನು ನೋಡಿ ಆಘಾತವಾಗಿದೆ. ಹರೀಶ್ ಅವರ ಮೇಲೆ ದಲಿತ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಿಸಬೇಕು ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ದಾವಣಗೆರೆ ಎಸ್ ಪಿ ಡಾ.ಅರುಣ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.