ಬುದ್ದಿ ಹೇಳಲು ಹೋದ ಕಾರ್ಪೋರೇಟರ್ ಸಹೋದರನ ಮೇಲೆ ಹಲ್ಲೆ : ಇಬ್ಬರ ಬಂಧನ
ದಾವಣಗೆರೆ : ಜಗಳ ಮಾಡುತ್ತಿದ್ದ 8-10 ಯುವಕರನ್ನ ಏಕೆ ಜಗಳ ಮಾಡುತ್ತಿದ್ದೀರಾ ಹೋಗಿ ಎಂದು ಬುದ್ದಿವಾದ ಹೇಳಿದವರ ಮೇಲೆಯೇ ಮಾರಣಾಂತಿಕ ಹಲ್ಲೆಯಾಗಿರುವ ಘಟನೆ ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ರಮೇಶ ಎಂಬುವವರು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೆ. 18ರ ರಾತ್ರಿ ಸುಮಾರು 10 ಗಂಟೆ 15 ನಿಮಿಷಕ್ಕೆ ನಗರದ ಹದಡಿ ರಸ್ತೆಯಲ್ಲಿರುವ ಚಾಮುಂಡಿ ಬಾರ್ ಅಂಡ್ ರೆಸ್ಟೋರೆಂಟ್‌ಗೆ ರಮೇಶ ಎಂಬ ವ್ಯಕ್ತಿ ಹೋಗಿದ್ದಾಗ ಇವರಿಗೆ ಪರಿಚಯಸ್ಥರಿದ್ದ ವೆಂಕಟೇಶ್ ಎಂಬುವವರು ಅಲ್ಲೇ ಇದ್ದರು. ಈ ಸಮುಯದಲ್ಲಿ ಯಾರೋ 8ರಿಂದ 10 ಜನ ಹುಡುಗರು ಜಗಳ ಮಾಡುತ್ತಿದ್ದದ್ದನ್ನು ಗಮನಿಸಿ ಹೊರಗೆ ಹೋಗಿ ವೆಂಕಟೇಶ್ ಯಾಕ್ರೋ ಜಗಳ ಮಾಡುತ್ತಿದ್ದೀರಾ ಹೋಗಿ ಎಂದು ಹೇಳಿದರು.
ಆಗ ಅವರಲ್ಲೊಬ್ಬ ಏನೋ ಹೋಗೋದು ನೀನೇನ್ ಹೇಳ್ತಿಯಾ ನನಗೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದನು. ಆಗ ನಾನು ಕೂಡ ಇರಲಿ ಹೋಗೋ ಎಂದು ಹೇಳಿದೆ. ಆಗ 7-8 ಜನ ಒಮ್ಮೆಲೆ ಬಂದು ಏನ್ರಲೇ ನಿಮ್ಮದು ಎಂದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕೈಕಾಲುಗಳಿಂದ ಹೊಡೆಯಲು ಮುಂದಾದರು. ಏನು ಇಲ್ಲ ಹೋಗ್ರಪ್ಪ ಅಂತ ಹೇಳಿದರು ಕೇಳದೆ ಬೈಯುತ್ತಲೇ ವೆಂಕಟೇಶ್ ಅವರಿಗೆ ಹೊಡೆದು, ಅದರಲ್ಲಿ ಒಬ್ಬ ಹುಡುಗ ಬಾರ್ ಒಳಗಿದ್ದ ಬಿಯರ್ ಬಾಟಲ್ ತಂದು ನಿಮ್ಮನ್ನ ಜೀವ ಸಹಿತ ಬಿಡಲ್ಲ ಎಂದು ನನ್ನ ತಲೆಗೆ, ಮೈಕೈಗೆ ಬಾಟಲಿಂದ ಹೊಡೆದು ಗಾಯಗೊಳಿಸಿದರು. ನಾನು ನೋವಿನಿಂದ ಕಿರುಚಿಕೊಳ್ಳುತ್ತಿದ್ದಾಗ ಸಾರ್ವಜನಿಕರು ಬರುವವಷ್ಟರಲ್ಲಿ ಅವರೆಲ್ಲರೂ ತಾವು ತಂದಿದ್ದ ಬೈಕ್‌ಗಳಲ್ಲಿ ಹೋದರು. ನಾನು ಚೇತರಿಸಿಕೊಂಡು ನೋಡುವಷ್ಟೋತ್ತಿಗೆ ವೆಂಕಟೇಶ್ ಪ್ರಜ್ಙೆತಪ್ಪಿ ಬಿದ್ದಿದ್ದರು. ನಂತರ ಯಾವುದೋ ಆಟೋದಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದೇವೆ ಎಂದು ದೂರು ದಾಖಲಿಸಿದ್ದಾರೆ.
ಹಳೆ ವೈಷಮ್ಯಕ್ಕೆ ಹಲ್ಲೆ? :
ಈ ಪ್ರಕರಣ ಕುರಿತು ದೂರು ನೀಡಿರುವ ರಮೇಶ ಯಾವುದೋ ಹಳೆಯ ವೈಷಮ್ಯದಿಂದ ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಪ್ರಯತ್ನಿಸಿದ್ದಾರೆ. ಹಾಗಾಗಿ ನನ್ನನ್ನು ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದಾರೆ.
ಪ್ರಕರಣದ ಈಗಿನ ಸ್ಥಿತಿ ಏನು? :
ರಮೇಶ ಅವರು ನೀಡಿದ ದೂರಿನನ್ವಯ ಬೆನ್ನತ್ತಿದ್ದ ಪೊಲೀಸ್ ಇಲಾಖೆ ಈಗಾಗಲೇ ಇಬ್ಬರನ್ನು ಹಿಡಿದು ತನಿಖೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನುಳಿದ 5 ರಿಂದ 6 ಜನ ತಪ್ಪಿಸಿಕೊಂಡಿದ್ದು ಅವರ ಜಾಡು ಹಿಡಿಯಲು ಮುಂದಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ 143, 147, 323, 324, 307, 504, 506, 149 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.