ಕುಮಾರ ಮಹಾರಾಜರ ಮೇಲೆ ಹಲ್ಲೆ! ಮೇ. 23ರಂದು ಬೃಹತ್ ಪ್ರತಿಭಟನೆ ಮೆರವಣಿಗೆ

ದಾವಣಗೆರೆ : ಹಾವೇರಿ  ಜಿಲ್ಲೆಯ ಸವಣೂರು ತಾಲೂಕು ಕೃಷ್ಣಾಪುರ ಬಂಜಾರ ಗುರುಪೀಠದ ಪರಮಪೂಜ್ಯ ಶ್ರೀ ಕುಮಾರ ಮಹಾರಾಜರ ಮೇಲೆ ನಡೆದಂತಹ ಜಾತಿನಿಂದನೆ ಹಾಗು ಹಲ್ಲೆ ಪ್ರಕರಣವನ್ನು ಖಂಡಿಸಿರುವ ಬಂಜಾರ ಸಮುದಾಯ ಮೇ.23ರ ಸೋಮವಾರದಂದು ಪ್ರತಿಭಟಿಸಲು ಮುಂದಾಗಿದೆ ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ. ಆರ್. ತಿಳಿಸಿದ್ದಾರೆ.

ಬಂಜಾರ ಸಮಾಜ ಬಾಂಧವರು, ಹೋರಾಟಗಾರರು, ಮಠಾಧೀಶರು, ದಲಿತ ಹಾಗು ಪ್ರಗತಿಪರ ಹೋರಾಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಕಿಡಿಗೇಡಿಗಳಿಗೆ ಕಠಿಣ ಕಾನೂನು ಶಿಕ್ಷೆ ವಿಧಿಸಲು ಆಗ್ರಹಿಸಬೇಕೆಂದು ವಿನಂತಿಸಿದ್ದಾರೆ. ಪೂಜೆಗೆ ಭಂಗವಾಗುತ್ತಿದ್ದ ಟ್ರ‍್ಯಾಕ್ಟರ್ ನಲ್ಲಿ ಹಾಕಿದ್ದ ಡಿಜೆ ಸದ್ದನ್ನು ಕಡಿಮೆಗೊಳಿಸುವಂತೆ ಹೇಳಿದ್ದಕ್ಕೆ ಕಿಡಿಗೇಡಿಗಳು ಶ್ರೀಗಳ ಮೇಲೆ ಹಲ್ಲೆ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!