ಕುಮಾರ ಮಹಾರಾಜರ ಮೇಲಿನ ಹಲ್ಲೆ ಖಂಡನೀಯ! ಡಿ.ಆರ್. ಗಿರೀಶ್

ದಾವಣಗೆರೆ : ಹಾವೇರಿ ಜಿಲ್ಲೆ ಸವಣೂರು ತಾಲ್ಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಬಂಜಾರ ಗುರುಪೀಠದ ಕುಮಾರ ಮಹಾರಾಜರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಡಿ. ಆರ್ ಗಿರೀಶ್ ಹೇಳಿದ್ದಾರೆ.
ಟ್ರ‍್ಯಾಕ್ಟರ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಡಿಜೆ ಸೌಂಡ್ ಕಡಿಮೆಗೊಳಿಸಲು ತಿಳಿ ಹೇಳಿದ ಶ್ರೀಗಳಿಗೆ ನಾಲ್ವರು ಯುವಕರು ಹಲ್ಲೆ ನಡೆಸಿದ್ದಾರೆ. ಗ್ರಾಮದ ಶ್ರೀಮಠದ ಹತ್ತಿರದಲ್ಲಿ ಡಿಜೆ ಸೌಂಡ್ ಕಡಿಮೆಗೊಳಿಸಲು ಕುಮಾರ ಮಹಾರಾಜರು ಕೋರಿದಾಗ ಯುವಕನೊಬ್ಬ ಧ್ವನಿ ಕಡಿಮೆಗೊಳಿಸಿಕೊಂಡು ಸಾಗಿದ್ದಾನೆ. ಪುನಃ ಸಂಜೆ ಮೂವರನ್ನು ಕರೆತಂದು ಗುರುಪೀಠದ ಪಕ್ಕದ ಜಮೀನಿನಲ್ಲಿ ಹೆಚ್ಚು ಧ್ವನಿಯಿಟ್ಟು ಜಮೀನು ಉಳುಮೆಗೆ ಮುಂದಾಗಿದ್ದ ಸಂದರ್ಭದಲ್ಲಿ ಮರಳಿ ಸ್ವಾಮೀಜಿ ಅವರು ಪೂಜೆಗೆ ತೊಂದರೆಯಾಗುತ್ತಿದೆ. ಧ್ವನಿ ಕಡಿಮೆ ಇಟ್ಟುಕೊಳ್ಳುವಂತೆ ಹೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.
ಈ ಕುರಿತು ಕೃಷ್ಣಾಪುರ ಗ್ರಾಮದ ಕೃಷ್ಣಾ ರಾಜನಗೌಡ್ರ ಗೌಡ್ರ, ದ್ಯಾಮಣ್ಣ ವೀರಪ್ಪ ಗೊಲ್ಲರ, ಕುಂದಗೋಳ ತಾಲ್ಲೂಕಿನ ಸೋಮನಕಟ್ಟಿ ಗ್ರಾಮದ ಪುಟ್ಟಪ್ಪ ವೀರಪ್ಪಗೌಡ್ರ, ಸುರೇಶ ಬಸನಗೌಡ ತಿಮ್ಮನಗೌಡ್ರ ಇವರ ಮೇಲೆ ಸವಣೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉಳಿದ ಇನ್ನೊಬ್ಬನನ್ನು ಬಂಧಿಸಬೇಕೆ0ದು ಗಿರೀಶ್ ಡಿ.ಆರ್ ಆಗ್ರಹಿಸಿದ್ದಾರೆ.