ಖ್ಯಾತ ಲೆಕ್ಕ ಪರಿಶೋಧಕ ಅಥಣಿ ವೀರಣ್ಣರಿಗೆ “ಜೀವಮಾನದ ಸಾಧನೆ” ಪ್ರಶಸ್ತಿ

ದಾವಣಗೆರೆ: ನಗರದ ಖ್ಯಾತ ಲೆಕ್ಕ ಪರಿಶೋಧಕ ಅಥಣಿ ವೀರಣ್ಣ ಇವರ ಅಮೃತ ಮಹೋತ್ಸವ ಹಾಗೂ ವೃತ್ತಿ ಜೀವನದ ಸುವರ್ಣ ಮಹೋತ್ಸವ ನಿಮಿತ್ತ ಇಂದು ಹುಬ್ಬಳ್ಳಿಯಲ್ಲಿ ಅವರ ಜೀವಮಾನದ ಸಾಧನೆಯನ್ನು ಗುರುತಿಸಿ ಐಇಎಂಎಸ್ ಬಿ-ಕಾಲೇಜಸ್ ವತಿಯಿಂದ ಗೌರವಿಸಲಾಯಿತು.
ಶ್ರೀ ಚರಂತಿಮಠ ಹಿರಿಯ ಲೆಕ್ಕ ಪರಿಶೋಧಕರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಹಾಗೂ ರಾಮಕೃಷ್ಣ ಆಶ್ರಮದ ಮಾತೆ ತ್ಯಾಗಾನಂದಮಯಿಯವರು ಸಾನಿಧ್ಯ ವಹಿಸಿದ್ದರು.