ಆಗಸ್ಟ್ 3 ರಿಂದ ಹರಿಹರದಲ್ಲಿ ಕುರಿ, ಮೇಕೆ ಸಂತೆ ರದ್ಧು.!
ದಾವಣಗೆರೆ: ಕೋವಿಡ್-19 ರ 3 ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹರಿಹರದ ಕುರಿ ಮತ್ತು ಮೇಕೆ ಸಂತೆಯನ್ನು ಆ.03 ರಿಂದ ಸರ್ಕಾರದ ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.
ಕೋವಿಡ್-19 ರ 3ನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಸುರಕ್ಷತೆಗಾಗಿ ಅನಾಹುತಗಳನ್ನು ತಡೆಗಟ್ಟಲು ಹೆಚ್ಚು ಜನರು ಸೇರುವಂತಹ ಸ್ಥಳಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ತಿಳಿಸಿರುವಂತೆ ಹರಿಹರ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಮಂಗಳವಾರ ಜರುಗುವ ಜಾನುವಾರು (ಕುರಿ ಮತ್ತು ಮೇಕೆ) ಸಂತೆಯನ್ನು ಸರ್ಕಾರದ ಮುಂದಿನ ಆದೇಶದವರೆಗೆ ರದ್ದುಗೊಳಿಸಲಾಗಿದೆ.
ಆದ್ದರಿಂದ ಕುರಿ ಮತ್ತು ಮೇಕೆ ಹಾಗೂ ಜಾನುವಾರುಗಳನ್ನು ರೈತಭಾಂಧವರು ಮಾರಾಟಕ್ಕೆ ತರಬಾರದು. ಖರೀದಿದಾರರು, ಮಾರಾಟಗಾರರು, ಸಾರ್ವಜನಿಕರು ಸಹಕರಿಸಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ತಿಳಿಸಿದ್ದಾರೆ.