Auto Meter: ಅಕ್ಟೊಬರ್ 5 ರೊಳಗಾಗಿ ಆಟೋಗಳಲ್ಲಿ ಪರಿಷ್ಕೃತ ದರ ಪಟ್ಟಿ ಮತ್ತು ಮೀಟರ್‌ಗಳನ್ನು ಖಡ್ಡಾಯವಾಗಿ ಅಳವಡಿಸುವಂತೆ ಸಾರಿಗೆ ಇಲಾಖೆ ಆದೇಶ

IMG_20210816_165255

ದಾವಣಗೆರೆ: ಆಟೋ ಚಾಲಕರು ಮತ್ತು ಮಾಲೀಕರುಗಳು ಬರುವ ಅ.5 ರೊಳಗಾಗಿ ಆಟೋಗಳಲ್ಲಿ ಪರಿಷ್ಕೃತ ದರ ಪಟ್ಟಿ ಮತ್ತು ಮೀಟರ್‌ಗಳನ್ನು ಖಡ್ಡಾಯವಾಗಿ ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಇಲಾಖೆ ಆದೇಶ ನೀಡಿದೆ.

ಪ್ರಯಾಣಿಕರಿಂದ ಆಟೋ ಚಾಲಕರು ಹೆಚ್ಚಿನ ದರ ಸುಲಿಗೆ ಮಾಡುತ್ತಿದ್ದಾರೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ರಕ್ಷಣಾ ಇಲಾಖೆ ಸಭೆ ನಡೆಸಿ, ದರ ಪರಿಷ್ಕರಣೆ ಮಾಡುವ ಜತೆಗೆ ಮೀಟರ್ ಅಳವಡಿಕೆ ಖಡ್ಡಾಯಗೊಳಿಸಿ ಆದೇಶ ನೀಡಿತ್ತು.

ಕಳೆದ ಜು.30 ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಆಟೋ ಚಾಲಕರ ಸಂಘದ ಅಧ್ಯಕ್ಷರು ಮತ್ತು ಚಾಲಕರೊಂದಿಗೆ ಸಭೆ ನಡೆಸಿ ಪರಿಷ್ಕೃತ ದರದೊಂದಿಗೆ ಇನ್ನುಮುಂದೆ ಆಟೋಗಳಲ್ಲಿ ಮೀಟರ್ ಅಳವಡಿಸಿಕೊಳ್ಳುವುದು ಖಡ್ಡಾಯಗೊಳಿಸಿ ಸೂಚನೆ ನೀಡಿ, ಸೆ.1 ಕ್ಕೆ ಗಡುವು ನೀಡಲಾಗಿತ್ತು.

ಆದರೆ, ನೀಡಿದ್ದ ಗಡುವು ಮುಗಿದರೂ ಆಟೋ ಚಾಲಕರು ಮೀಟರ್ ಅಳವಡಿಸಿಕೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ಶ್ರೀಧರ್ ಕೆ. ಮಲ್ನಾಡ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅ.5ರೊಳಗೆ ಮೀಟರ್ ಅಳವಡಿಸಿಕೊಳ್ಳಲು ಅಂತಿಮ ಗಡುವು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!