ಅವೈಜ್ಞಾನಿಕ ಫಲಿತಾಂಶಕ್ಕೆ ಕಾನೂನು ವಿದ್ಯಾರ್ಥಿಗಳ ಅಸಮಾಧಾನ

ದಾವಣಗೆರೆ. ಜು.೧೩; ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲವು ಅವೈಜ್ಞಾನಿಕವಾಗಿ ಫಲಿತಾಂಶ ಪ್ರಕಟಮಾಡಿದೆ ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಎಸ್ ಎಫ್ ಐ ಜಿಲ್ಲಾ ಸಂಚಾಲಕ ಲಕ್ಷ್ಮಣ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2019-20 ರ ಸಾಲಿನಲ್ಲಿ ಕಾನೂನು ಪದವಿಗೆ ಪ್ರವೇಶ ಪಡೆದು ಮೊದಲನೆಯ ಮತ್ತು ಮೂರನೆಯ ಸೆಮಿಸ್ಪಲ್ ಗಳ ಪರೀಕ್ಷೆಗಳಿಗೆ ಹಾಜರಾಗಲಾಗಿದೆ , ಆದರೆ 2 ನೇ ಮತ್ತು 4 ನೇಯ ಸೆಮಿಸ್ಟರ್ ಗಳಿಗೆ ಯಾವುದೇ ಭೌತಿಕ ತರಗತಿಗಳು ನಡೆದಿರುವುದಿಲ್ಲ ಕೊರೊನಾ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯದ ಕಾರಣ ವಿದ್ಯಾರ್ಥಿಗಳು ಆಂತರಿಕ ಪರೀಕ್ಷೆಗಳಿಗೆ ಮಾತ್ರ ಹಾಜರಾಗಿದ್ದರು , ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತಾವಾದ ಸೌಕರ್ಯಗಳು ದೊರೆತಿರುವುದಿಲ್ಲ ಆದ್ದರಿಂದ ಕೆಲ ವಿದ್ಯಾರ್ಥಿಗಳು ಗೈರಾಗಿದ್ದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಈ ಒಂದು ಸಮಸ್ಯೆಯನ್ನು ನೀಗಿಸದೇ ಹುಬ್ಬಳಿ ಕಾನೂನು ವಿವಿಯು ಸಮಸ್ಯೆಗಳನ್ನು ಪರಿಗಣಿಸದ ಪರೀಕ್ಷೆಯನ್ನು ನಡೆಸದೆ ಫಲಿತಾಂಶವನ್ನು ಪ್ರಕಟಿಸಿರುವುದು . ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸಂಕಷ್ಟ ಉಂಟು ಮಾಡಿದೆ.ಕಾನೂನು ವಿಶ್ವವಿದ್ಯಾಲಯವು ಪ್ರಕಟಿಸಿದ 2 ನೇ ಹಾಗೂ 4 ನೇ ಸೆಮಿಸ್ಟರ್ ನ ಫಲಿತಾಂಶದ ಅಂಕಪಟ್ಟಿಯಲ್ಲಿ ಥೇಯರಿ ಅಂಕಗಳನ್ನು ಖಾಲಿ ಬಿಟ್ಟಿರುವುದರುವುದು ಸಂಶಯವನ್ನು ಸೃಷ್ಟಿಸಿದೆ , ಆದ್ದರಿಂದ ಸೂಕ್ತವಾದ ಸುತ್ತೋಲೆಯನ್ನು ನೀಡಬೇಕು.ಎಲ್ಲಾ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳನ್ನು ಪಾಸು ಮಾಡಲು ತಮ್ಮದೇ ಆದ ಮಾನದಂಡವನ್ನು ಹೊಂದಿವೆ.
ಕೊರೊನಾ ಹಿನ್ನೆಲೆಯಲ್ಲಿ ಆ ಮಾನದಂಡವನ್ನು ಅನುಸರಿಸದೆ ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಲ್ಲಾ ವಿದ್ಯಾರ್ಥಿಗಳನ್ನು ಪಾಸು ಮಾಡಿದೆ ಆದರೆ ನಮ್ಮ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯವು ಶೇಕಡ 40 % ಅನ್ನು ನಿಗದಿಪಡಿಸದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಾರ್ಗಸೂಚಿಯಲ್ಲಿ ತಿಳಿಸಿದಂತೆ ಶೇಕಡ 40 % ಅನ್ನು ನಿಗದಿಪಡಿಸದೆ ಈ ಕ್ರಮವನ್ನು ತೆಗೆದುಹಾಕಬೇಕು. ಥೇಯರಿ ಅಂಕ ಖಾಲಿಬಿಟ್ಟ ಸ್ಥಳವನ್ನು ಯಾವ ಕಾರಣಕ್ಕಾಗಿ ಖಾಲಿ ಬಿಟ್ಟಿದ್ದೀರಿ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಮನವಿ ಮಾಡಿದ್ದಾರೆ. ಇಂದು ಬೆಳಗ್ಗೆ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಿ.ಸಿ ರಾಕೇಶ್,ರಮೇಶ್ ನಾಯ್ಕ್, ಸಿದ್ದನಗೌಡ ಇದ್ದರು.