ಲೋಕಿಕೆರೆ, ನಲ್ಲೂರಲ್ಲಿ ಜಾಗೃತಿ ಅಭಿಯಾನ ಸ್ಪಂದನ ಕಲಾತಂಡದಿಂದ ಮತದಾನ ಮಾರಾಟಕ್ಕಲ್ಲ….
ದಾವಣಗೆರೆ : ನಗರದ ಸಾಂಸ್ಕೃತಿಕ ಇಪ್ಟಾ ಅಂಗ ಸಂಘಟನೆ ಸಂಸ್ತೆ ಸ್ಪಂದನ ತಂಡದ ಕಲಾವಿದರು, ಮಾಯಾಕೊಂಡ ಕ್ಷೇತ್ರದ ಲೋಕಿಕೆರೆ,ಚೆನ್ನಗಿರಿ ಕ್ಷೇತ್ರ ನಲ್ಲೂರು ಹಾಗೂ ಹರಿಹರದ ಅಮರಾವತಿ ಕಾಲೋನಿಯಲ್ಲಿ ಮತದಾನ ಜಾಗೃತಿ ಅಭಿಯಾನ ಅಂಗವಾಗಿ ನೆಡೆದ ಮತ ಮಾರಾಟಕ್ಕಲ್ಲ, ನಮ್ಮ ನೆಡೆ ಮತಗಟ್ಟೆ ಕಡೇಗೇ…ಎಂಬ ಸಂದೇಶ ಸಾರುವ ಕಿರು ಬೀದಿ ನಾಟಕ ಜಾಗೃತಿ ಮೂಡಿಸುವ ಜಾಗೃತಿ ಮೂಡಿಸುವ ಹಾಡುಗಳ ಮೂಲಕ ಕಡ್ಡಾಯ ಮತದಾನ ಮಾಡುವ ಮುಖಾಂತರ ತಮ್ಮ ಹಕ್ಕನ್ನು ಚಲಾಯಿಸಿ ಎಂದು ಸಾಂಸ್ಕೃತಿಕ ಜಾಥಾ ನಡೆಸಿದರು.
ಕೇವಲ ಕ್ಷಣಿಕ,ಹಣ,ಮಧ್ಯ,ವಸ್ತುಗಳ ಆಮಿಷಕ್ಕೆ ಬಲಿಯಾಗದೆ ತಮ್ಮ ಪವಿತ್ರ ಮತವನ್ನು ಮಾರಾಟಕ್ಕಿಡದೇ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಸಂವಿಧಾನ ಆಶಯದಂತೆ ಎಲ್ಲರೂ ತಪ್ಪದೆ ಕಡ್ಡಾಯ ಮತದಾನ ಮಾಡುವ ಮುಖಾಂತರ ತಮ್ಮ ಹಕ್ಕನ್ನು ಚಲಾಯಿಸಿ ಎಂದು ತಂಡದ ಕಲಾವಿದರು ಸಾಂಸ್ಕೃತಿಕ ಜಾಥಾ ನಡೆಸಿ, ಬೀದಿ ನಾಟಕ ಪ್ರದರ್ಶನ, ಹಾಗೂ ಹಾಡುಗಳ ಹಾಡಿ ನೆರೆದ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಯಶಸ್ವಿ ಗೊಳಿಸಿದರು.
ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಸ್ವೀಪ್ ಚುನಾವಣೆ ಸಮಿತಿ, ಆಯಾ ಗ್ರಾಮ ಪಂಚಾಯತ್ ಪುರಸಭೆ ವ್ಯಾಪ್ತಿಯ ಮುಖ್ಯ ದೇವಾಲಯ,ಆವರಣ, ಮುಖ್ಯ ವೃತ್ತದಲ್ಲಿ ಈ ಮತದಾನ ಜಾಗೃತಿ ಅಭಿಯಾನ ನೆಡೆಸಲಾಯಿತು.
ಮತದಾನ ಮಹತ್ವ, ಕಡ್ಡಾಯ ಮತದಾನ ಮಾಡಿ ತಮ್ಮ ಹಳ್ಳಿಯ ಅಭಿವೃದ್ಧಿ ಗಾಗಿ ಸೂಕ್ತ ವ್ಯಕ್ತಿ ಗಳನ್ನು ಆಯ್ಕೆ ಮಾಡುವ ಅವಕಾಶ ತಪ್ಪಿಸಿಕೊಳ್ಳದೇ ಮತದಾನದಲ್ಲಿ ಪಾಲ್ಗೊಳ್ಳಿ ಎಂದು ಸಂದೇಶ ನೀಡಿದರು,ಆಯಾ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಅಂಗನವಾಡಿ ಕಾರ್ಯಕರ್ತೆ ಆಶಾ ಕಾರ್ಯಕರ್ತೆರು ಮಹಿಳಾ ಮಂಡಳಿಗಳ ಪ್ರತಿನಿಧಿಗಳು, ಸ್ಪಂದನ ತಂಡದ ಇಪ್ಟಾ ಕಲಾವಿದರು ಪಾಲ್ಗೊಂಡಿದ್ದರು.