ಜೈನ ಧರ್ಮದ ಅಸ್ಮಿತೆಯ ಪ್ರತಿಕವಾದ ಗೋಮ್ಮಟೇಶ್ವರ ಮೂರ್ತಿ ಅವಮಾನ ಪ್ರಕರಣದಲ್ಲಿ ಅಯೂಬ್ ಖಾನ್ ಬಂಧನ ಸ್ವಾಗತರ್ಹ – ಕಾಂಗ್ರೆಸ್ ವಕ್ತಾರ ದರ್ಶನ ಬಳ್ಳೇಶ್ವರ

ದಾವಣಗೆರೆ: ಹೊನ್ನಾಳಿಯಲ್ಲಿ ಮಾತನಾಡಿದ ಅವರ ಡಾ ಬಾಬಾ ಸಾಹೇಬ್ ಅಂಬೇಡ್ಕರ ಭಾರತ ಸಂವಿಧಾನದ ಶಕ್ತಿಯೆ ಹಾಗೆ ನೂರು ಮತವಿರಲಿ, ಮೂರು ಮತವಿರಲಿ ಎಲ್ಲಾರು ಭಾರತೀಯರು ಇಲ್ಲಿ ಎಲ್ಲಾರೂ ಸಮಾನರು . ಭಾರತ ಜ್ಯಾತ್ಯತಿತ ರಾಷ್ಟ್ರ ಇಲ್ಲಿ ಎಲ್ಲಾ ಧರ್ಮಗಳಿಗೂ ಅವರದ್ದೆ ಆದ ಸಂಪ್ರದಾಯಗಳನ್ನು ನಡೆಸಿಕೊಳ್ಳುವ ಅವಕಾಶ ಇದೆ.ಡಾ ಬಾಬಾ ಸಾಹೇಬ್ರ ಭಾರತ ಸಂವಿಧಾನದಡಿಯಲ್ಲಿ ಎಲ್ಲಾರು ಸಮಾನರು .ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾದ “ಜೈನರು” ಕೂಡ ತಮ್ಮ ಧರ್ಮದ ಅಸ್ಮಿತೆ ಉಳಿಸಿಕೊಳ್ಳಲು “ಡಾ ಬಿ ಆರ್ ಅಂಬೇಡ್ಕರ್” ಕೊಟ್ಟ ಸಂವಿಧಾನ ಕಾರಣ.ಇದು ಭಾರತ ಸಂವಿಧಾನದ ಶಕ್ತಿ ಎಂದರು.
ಜೈನ ಧರ್ಮದಲ್ಲಿ ವಿರಾಗಿಯಾದ ಗೋಮ್ಮಟೇಶ್ವರ ತ್ಯಾಗ ಮತ್ತು ಸರ್ವಸಂಗ ಪರಿತ್ಯಾಗದ ಸಂಕೇತ ಅದನ್ನು ಅಯೂಬ್ ಖಾನ್ ಅವಮಾನವಾಗುವ ರೀತಿಯಲ್ಲಿ ಮಾತನಾಡಿರುವುದು ಖಂಡನೀಯ ಎಂದು ಅಭಿಪ್ರಾಯಪಟ್ಟರು.

 
                         
                       
                       
                       
                       
                       
                       
                      