ಆಟೋರಿಕ್ಷಾ ದಲ್ಲಿ ಬಿಟ್ಟು ಹೋದ ಬಂಗಾರದ ಆಭರಣಗಳನ್ನು ಪತ್ತೆ ಮಾಡಿ ಹಿಂತಿರುಗಿಸಿದ ಆಜಾದ್ ನಗರ ಪೋಲೀಸ್

ದಾವಣಗೆರೆ: ದಾವಣಗೆರೆ ನಗರದ ರೈಲ್ವೆ ಸ್ಟೇಶನ್ ಮುಂಭಾಗದ ಆಟೋ ನಿಲ್ದಾಣದಲ್ಲಿ ಆಟೋ ರಿಕ್ಷಾ ಬಾಡಿಗೆ ಮಾಡಿಕೊಂಡು ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿ ಲೇಔಟ್ ಬಳಿ ಆಟೋ ರಿಕ್ಷಾ ಇಳಿದು ಮನೆಗೆ ಹೋಗಿ ನೋಡಿದಾಗ ಚಿನ್ನದ ಆಭರಣಗಳು ಇದ್ದ ಬ್ಯಾಗನ್ನು ಆಟೋದಲ್ಲಿ ಬಿಟ್ಟು ಇಳಿದು ಮಹಿಳೆಗೆ ದಾವಣಗೆರೆ ಪೋಲೀಸರು ಪತ್ತೆ ಹಚ್ಚಿದ ಘಟನೆ ನಡೆದಿದೆ.

ಮನೆಗೆ ಬಂದ ನಂತರ ಆಭರಣಗಳಿದ್ದ ಬ್ಯಾಗ್ ಆಟೋ ದಲ್ಲಿ ಬಿಟ್ಟಿರುವ ಬಗ್ಗೆ ಗಮನಕ್ಕೆ ಬಂದಿದ್ದು ಈ ಬಗ್ಗೆ  ಶ್ರೀಮತಿ ನಜ್ಮಾ, ವಾಸ: 2ನೇ ಮೇನ್ 2ನೇ ಕ್ರಾಸ್ ದಾವಣಗೆರೆ ರವರು  ಆಜಾದ್ ನಗರ ಠಾಣೆಯಲ್ಲಿ ಮಾಹಿತಿ ನೀಡಿದ್ದಾರೆ. ಕೂಡಲೆ ಕಾರ್ಯಪ್ರವೃತ್ತರಾದ ಆಜಾದ್ ನಗರ ಪೊಲೀಸರು ಆಟೋರಿಕ್ಷಾ ಮತ್ತು ಚಾಲಕನನ್ನು ಪತ್ತೆ ಮಾಡಿ ಆಟೋದಲ್ಲಿದ್ದ ಬ್ಯಾಗ್ ನಲ್ಲಿದ್ದ 1) 15 ಗ್ರಾಂ ತೂಕದ ಬಂಗಾರದ ಕಿವಿ ಒಲೆ, 2) ಸ್ಕೂಲ್ ಮಕ್ಕಳ ಬಟ್ಟೆ, 3) ಆಧಾರ್ ಕಾರ್ಡ ಹಾಗೂ ಇತರೆ ದಾಖಲೆಗಳನ್ನು ಆಟೋ ಚಾಲಕನ ಉಪಸ್ಥಿತಿಯಲ್ಲಿ ದೂರುದಾರರಿಗೆ ಹಸ್ತಾಂತರಿಸಲಾಯಿತು.

ಶ್ರೀ ಮಲ್ಲೇಶ್ ದೊಡ್ಡ ಮನಿ ಡಿವೈಎಸ್ಪಿ ನಗರ ಉಪ ವಿಭಾಗ ದಾವಣಗೆರೆ ರವರ ಮಾರ್ಗದರ್ಶನದಂತೆ ಕೂಡಲೆ ಕಾರ್ಯ ಪ್ರವೃತ್ತರಾದ ಶ್ರೀ ಅಶ್ವಿನ್ ಕುಮಾರ್ ಆರ್ ಜಿ ಪೊಲೀಸ್ ನಿರೀಕ್ಷಕರು ಆಜಾದ್ ನಗರ ಪೊಲೀಸ್ ಠಾಣೆ ರವರ ತಂಡ ಹಾಗೂ ಸಿಬ್ಬಂದಿಗಳಾದ ಮಂಜುನಾಥ ನಾಯ್ಕ್, ನರೇಶ್ ಎ.ಪಿ., ಗುಗ್ಗರಿ ಲೋಕೇಶ್, ಖಾಜಾ ಹುಸೇನ್, ಕೃಷ್ಣ, ಎನ್, ವೆಂಕಟೇಶ್ ಜಿ ಆರ್ ಇವರುಗಳನ್ನು ಒಳಗೊಂಡ ತಂಡವು 1ಲಕ್ಷ ರೂ ಮೌಲ್ಯದ ಆಭರಣಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ. ಈ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಹಾಗೂ ಆಟೋ ಚಾಲಕನಿಗೆ ಪ್ರಸಂಶೆ ವ್ಯಕ್ತಪಡಿಸಿರುತ್ತಾರೆ,

Leave a Reply

Your email address will not be published. Required fields are marked *

error: Content is protected !!