ಬಿ.ಎಂ. ಪ್ರಥಮ್ 1ನೇ ರನ್ನರ್ ಅಪ್

ಬಿ.ಎಂ. ಪ್ರಥಮ್ 1ನೇ ರನ್ನರ್ ಅಪ್
ದಾವಣಗೆರೆ: ಗ್ಯಾಲಕ್ಸಿ ಎಜು ಇನ್ನೋವೇಶನ್ ವತಿಯಿಂದ ಈಚೆಗೆ ಗೋವಾದಲ್ಲಿ ನಡೆದ ೩ನೇ ರಾಷ್ಟ್ರಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ನಗರದ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್ನ ವಿದ್ಯಾರ್ಥಿ ಬಿ.ಎಂ. ಪ್ರಥಮ್ ಇವರು 1ನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ.
ನಗರದ ರಾಷ್ಟ್ರೋತ್ಥಾನ ಶಾಲೆಯ ಶಿಕ್ಷಕಿ ಸಿ.ಎಂ. ಪ್ರೇಮಾ ಮತ್ತು ಬಿ.ಎಂ. ಪ್ರಸನ್ನ ದಂಪತಿಯ ಪುತ್ರನಾದ ಪ್ರಥಮ್ ಅವರು ರಾಷ್ಟೋತ್ಥಾನ ಶಾಲೆಯಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಇವರಿಗೆ ಶಾಲೆಯಿಂದ ಹಾಗೂ ಲಿಟಲ್ ಜೀನಿಯಸ್ ಅಬಾಕಸ್ ಸೆಂಟರ್ನಿಂದ ಅಭಿನಂದನೆ ಸಲ್ಲಿಸಲಾಗಿದೆ.
