ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆ – ನಾಲ್ವರ ಮೇಲೆ ಗೂಂಡಾ ಕಾಯ್ದೆ ಹಾಗೂ 13 ಮಂದಿಗೆ ಗಡಿಪಾರು ಆದೇಶ
ಮಂಗಳೂರು: ಲೋಕಸಭೆ ಚುನಾವಣೆಯ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು ನಗರದಲ್ಲಿ 13 ಮಂದಿಯನ್ನು ಲಿಸ್ಟ್ ಮಾಡಿ ಜಿಲ್ಲೆಯಿಂದ ಬೇರೆಡೆಗೆ ಗಡೀಪಾರು ಆದೇಶ ಹಾಗೂ ನಾಲ್ವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಯನ್ನು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೊರಡಿಸಿದ್ದಾರೆ.
ಪಾದೇಕಲ್ಲು, ಬೋಳಾರ ಜ್ಞಾನೇಶ್ ನಾಯಕ್(25), ಕುದ್ರೋಳಿ, ಅಬ್ದುಲ್ ಫಹಾದ್(25), ಉಳ್ಳಾಲದ ಮೊಗವೀರ ಪಟ್ಟಣದ ಧನುಷ್(30), ಶಾಂತಿನಗರ, ಕಾವೂರು, ಮೊಹಮದ್ ಸುಹೇಬ್ (28),ವಾಮಂಜೂರಿನ ದೀಪಕ್ ಪೂಜಾರಿ (38), ಸುರತ್ಕಲ್ ಕಾಟಿಪಳ್ಳದ ಶಾಹಿಲ್ ಇಸ್ಮಾಯಿಲ್ (27), ಉಳ್ಳಾಲದ ಮೊಹಮದ್ ಶಾಕಿರ್ (30), ಉಳ್ಳಾಲಮೇಲಂಗಡಿ ಇಬ್ರಾಹಿಂ ಖಲೀಲ್ (22), ಕುದ್ರೋಳಿ ಕರ್ನಲ್ ಗಾರ್ಡನ್, ಧನುಷ್ (28), ಮಂಗಳೂರು ಫೈಝಲ್ ನಗರ ಟೊಪ್ಪಿ ನೌಫಲ್ (35) , ಮಂಗಳೂರು ಹವಿತ್ ಪೂಜಾರಿ (28), ಪರಂಗಿಪೇಟೆ ಕೌಶಿಕ್ ನಿಹಾಲ್ (24),ಮೂಡಬಿದಿರೆ ಬೆಳುವಾಯಿ, ಸಂತೋಷ್ ಶೆಟ್ಟಿ (34) ಗಡಿಪಾರು ಆದೇಶಕ್ಕೆ ಒಳಗಾದ ಆರೋಪಿಗಳಾಗಿದ್ದಾರೆ.
ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ನೆಹರು ನಾಗರ ಮುಡಾ ಬಡಾವಣೆಯ ಹೇಮಚಂದ್ರ ಅಲಿಯಾಸ್ ಪ್ರಜ್ವಲ್ ಪೂಜಾರಿ(29), ಉಳ್ಳಾಲ ಕೈರಂಗಳ ನಿವಾಸಿ ನವಾಜ್ ಅಲಿಯಾಸ್ ನವ್ವಾ(36), ಕುದ್ರೋಳಿ ನಿವಾಸಿ ಅನೀಶ್ ಅಶ್ರಫ್ (26), ಬೋಳೂರು ನಿವಾಸಿ ಚರಣ್ ಶೇಟ್ ಅಲಿಯಾಸ್ ಚರಣ್ ಪಾಲ್ (39) ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.