ಚಿತ್ರದುರ್ಗ ಶರಣರು ಹೇಳಿದ ‘ಸ್ನೇಹಕ್ಕೂ ಬದ್ದ ಸಮರಕ್ಕೂ ಸಿದ್ದ’ ನುಡಿಗೆ ಬಾಡದ ಅನಂದರಾಜ್ ಬೆಂಬಲ

ದಾವಣಗೆರೆ: ಸಂಧಾನಕ್ಕೂ ಬದ್ದ ಸಮರಕ್ಕೂ ಸಿದ್ದ ಎಂಬ ಡಾ.ಶಿವಮೂರ್ತಿ ಶರಣರ ನುಡಿಗೆ ದಾವಣಗೆರೆ ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟ ಸಂಪೂರ್ಣವಾಗಿ ಬೆಂಬಲಿಸಿದೆ.

ಬಾಡದ ಆನಂದರಾಜ್ ರವರು ಚಿತ್ರದುರ್ಗದ ಮುರುಘಾ ಮಠದಲ್ಲಿ ಡಾ.ಶಿವಮೂರ್ತಿ ಶರಣರನ್ನು ಬೇಟಿ ಮಾಡಿ ಮಾದ್ಯಮದವರೊಂದಿಗೆ ಮಾತನಾಡುತ್ತಾ ಹಿಂದಿನಿಂದಲೂ ಯಾರು ಶೋಷಿತರ ಪರವಾಗಿ ಹೋರಾಟ ಮಾಡುತ್ತಾರೋ ಅವರಿಗೆ ಇಂತಹ ಸಂಕಷ್ಟ ತಪ್ಪಿದ್ದಲ್ಲ. ಉದಾಹರಣೆಗೆ ಬಸವಣ್ಣರಿಗಾಗಲಿ ಅಂಬೇಡ್ಕರ್ ರವರಿಗಾಗಲಿ ಸಂಗೊಳ್ಳಿ ರಾಯಣ್ಣರಗಾಗಲಿ ಅದೇ ರೀತಿ ನಮ್ಮ ಆಧುನಿಕ ಕಾಲದ ಬಸವಣ್ಣರೆಂದೇ ಹೆಸರಾಗಿರುವ ಚಿತ್ರದುರ್ಗದ ಮುರುಘ ಶರಣರಾದ ಡಾ.ಶಿವಮೂರ್ತಿ ಶರಣರಿಗೆ ಪಟ್ಟಭದ್ರ ಹಿತಶಕ್ತಿಗಳ ಕೈವಾಡವಿದೆಯೆಂದು ಬಾಡದ ಆನಂದರಾಜ್ ಹೇಳಿದರು.

ಶರಣರಿಗೆ ಆತ್ಮಸ್ಥೈರ್ಯ ಮತ್ತು ನಿಮ್ಮದೊಂದಿಗೆ ನಾವಿದ್ದೇವೆ ಎಂದು ದಾವಣಗೆರೆ ಅಭಿಮಾನಿ ಬಳಗದ ಮತ್ತು ಜಿಲ್ಲಾ ಶೋಷಿತ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್,  ಸಾಮಾಜಿಕ ಕಾರ್ಯಕರ್ತ ಒಣರೊಟ್ಟಿ ಮಹಂತೇಶ್. ಕೊರಚ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ಜಿ.ಕೃಷ್ಣಪ್ಪ. ಮಾಜಿ ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್. ಒಕ್ಕಲಿಗರ ಸಂಘದ ಕಾರ್ಯದರ್ಶಿ ಹನುಮೇಗೌಡ ಇನ್ನು ಮುಂತಾದವರಿದ್ದರು.

Leave a Reply

Your email address will not be published. Required fields are marked *

error: Content is protected !!