‘ಮೋದಿಗೆ ಬಹುಪರಾಕ್..’ ತಕ್ಷಣ ಚುನಾವಣೆ ನಡೆದರೂ NDA ಮತ್ತೆ ಅಧಿಕಾರಕ್ಕೆ.. ಸಮೀಕ್ಷೆ ಫಲಿತಾಂಶದ ಕುತೂಹಲ..

'Bahuparak for Modi..' Even if the elections are held immediately, NDA will come back to power.. Curious about the poll results..

ದೆಹಲಿ: ಪ್ರಧಾನಿ ನರೇಂದ್ರ ಮೋದಿಗೆ ದೇಶದ ಜನತೆ ಮತ್ತೆ ಬಹುಪರಾಕ್ ಹೇಳಿದ್ದಾರೆ. ತಕ್ಷಣ ಲೋಕಸಭಾ ಚುನಾವಣೆ ನಡೆದರೂ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ಬಗ್ಗೆ ಸಮೀಕ್ಷೆಯೊಂದು ಬೆಳಕು ಚೆಲ್ಲಿದೆ.
ರಾಜಕೀಯ ಸಮೀಕ್ಷೆಯಲ್ಲಿ ಯಶಸ್ಸು ಕಂಡಿರುವ ‘ಸಿ ಓಟರ್’ ಇಂಡಿಯಾ ಟುಡೇ ಸಹಯೋಗದಲ್ಲಿ ಈ ಸಮೀಕ್ಷೆ ಕೈಗೊಂಡಿದ್ದು, ದೇಶದಲ್ಲಿ ಮೋದಿ ಪ್ರಭಾವ ಹೆಚ್ಚಿರುವತ್ತ ಬೊಟ್ಟು ಮಾಡಿದೆ. ಕೂಡಲೇ ಚುನಾವಣೆ ನಡೆದರೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ, ಜೊತೆಗೆ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತ ಎಂದು ಸಮೀಕ್ಷೆ ಹೇಳಿದೆ.


ಸಮೀಕ್ಷೆಯ ಲೆಕ್ಕಾಚಾರ ಹೀಗಿದೆ:
 ಒಟ್ಟು ಕ್ಷೇತ್ರಗಳ ಸಂಖ್ಯೆ 543
 ಎನ್ಡಿಎ : 298
 ಯುಪಿಎ : 15
 ಇತರರು : 92
ಮೋದಿ ಸರ್ಕಾರ ಬಗ್ಗೆ ಶೇ.67 ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಸಾಧನೆ ಬಗ್ಗೆ ಕಳೆದ ವರ್ಷಕ್ಕಿಂತ ಕಡಿಮೆ ಅಂಕಗಳು ಸಿಕ್ಕಿವೆ. ರಾಮ ಮಂದಿರ ನಿರ್ಮಾಣ ವಿಚಾರ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿದೆ. ಸಮಾನ ನಾಗರಿಕ ಸಂಹಿತೆ ವಿಚಾರ ಕೂಡಾ ಬಿಜೆಪಿ ಪಾಲಿಗೆ ವರದಾನವಾಗಲಿದೆ.


ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಶಸ್ಸು ಮತಗಳಾಗಿ ಪರಿವರ್ತನೆಯಾಗದು ಎಂಬ ಅಭಿಪ್ರಾಯವೂ ಈ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಸುಮಾರು 3,500 ಕಿ.ಮೀ. ದೂರದ ಪಾದಯಾತ್ರೆಯು ಜನರನ್ನು ಸೇರಿಸಿದರೂ, ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಗೆ ಇದರಿಂದಾಗಿ ಮತಗಳು ಸಿಗುವುದು ಕಷ್ಟಸಾಧ್ಯ ಎಂಬ ಅಭಿಪ್ರಾಯವೂ ಈ ಸಮೀಕ್ಷೆಯ ಹೈಲೈಟ್ಸ್.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!