ವಕೀಲರ ಸಂಘದ ಚುನಾವಣೆ ಏ.24 ಕ್ಕೆ

ದಾವಣಗೆರೆ: ವಕೀಲರ ಸಂಘದ 2023-24 ಮತ್ತು 2024-25 ನೇ ಸಾಲಿನ ದ್ವಿ ವಾರ್ಷಿಕ ಸಾಲಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸಹ ಕಾರ್ಯದರ್ಶಿ ಮತ್ತು ಒಬ್ಬ ಮಹಿಳಾ ಸದಸ್ಯೆ ಸೇರಿ 9 ಜನ ಕಾರ್ಯಕಾರಿ ಸಮಿತಿಯ ಸದಸ್ಯರ ಸ್ಥಾನಗಳಿಗಾಗಿ ಏ.24 ರಂದು ಚುನಾವಣೆ ನಿಗಧಿಯಾಗಿದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ದಾವಣಗೆರೆ ವಕೀಲರ ಸಂಘದ ಅಜೀವ ಸದಸ್ಯ ವಕೀಲ ಅಭ್ಯರ್ಥಿಗಳು ಏ.1 ರಿಂದ ಏ.11 ರ ವರೆಗೂ ಪ್ರತಿದಿನ ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ ಮಧ್ಯಾಹ್ನ 3 ಗಂಟೆಯ ಒಳಗಾಗಿ ಅರ್ಜಿಯನ್ನು ಪಡೆದು ನಾಮಪತ್ರವನ್ನು ಸಲ್ಲಿಸಬಹುದಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಲ್. ದಯಾನಂದ ತಿಳಿಸಿದ್ದಾರೆ.