ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಚಾಲನೆ

ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಬಿಬಿಎಂಪಿ ಆಡಳಿತಾಧಿಕಾರಿ ಶ್ರೀ ರಾಕೇಶ್ ಸಿಂಗ್ ಅವರು ಚಾಲನೆ ನೀಡಿದರು. ನಂತರ ಪುರಾಣ ಪ್ರಸಿದ್ಧ ದೊಡ್ಡ ಗಣಪತಿಗೆ ಪೂಜೆ ಸಲ್ಲಿಸಿ ದೇಶ ಬಹುಬೇಗ ಕೋವಿಡ್ ಸೋಂಕಿನಿಂದ ಮುಕ್ತವಾಗಲೆಂದು ಪ್ರಾರ್ಥಿಸಿದರು. ಶಾಸಕ ಶ್ರೀ ರವಿ ಸುಬ್ರಹ್ಮಣ್ಯ, ಶ್ರೀ ಉದಯ್ ಗರುಡಾಚಾರ್, ಮುಖ್ಯ ಆಯುಕ್ತ ಶ್ರೀ ಗೌರವ್ ಗುಪ್ತಾ ಪಾಲ್ಗೊಂಡಿದ್ದರು.
ಇತಿಹಾಸ ಪ್ರಸಿದ್ಧ ಬೆಂಗಳೂರಿನ ಬಸವನಗುಡಿ ದೊಡ್ಡ ಗಣಪತಿ ದೇವಸ್ಥಾನದ ಬಳಿ ನಡೆಯುವ ಕಡಲೇಕಾಯಿ ಪರಿಷೆ ಇಂದಿನಿಂದ ಆರಂಭವಾಗಿದೆ. 3 ದಿನದ ಜಾತ್ರೆಯಲ್ಲಿ ವಿವಿಧ ತಳಿಗಳ ಕಡಲೇಕಾಯಿ ರಾಶಿಗಳು ಗಮನ ಸೆಳೆಯುತ್ತಿವೆ. ನೆರೆಯ ರಾಜ್ಯಗಳ ವ್ಯಾಪಾರಸ್ಥರು ಪರಿಷೆಯಲ್ಲಿ ಪಾಲ್ಗೊಂಡಿದ್ದಾರೆ.ಕೋವಿಡ್ ನಿಂದಾಗಿ ಮುನ್ನೆಚ್ಚರಿಕಾ ಕ್ರಮದೊಂದಿಗೆ ಜಾತ್ರೆ ನಡೆಯುತ್ತದೆ.