ಸ್ತ್ರೀ ವಿಮೋಚನಾ ಹೋರಾಟವನ್ನು ಪ್ರಾರಂಭಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ – ಬಸವಪ್ರಭು ಸ್ವಾಮೀಜಿ

ದಾವಣಗೆರೆ : ಮಹಿಳೆಯನ್ನು ಮಹಿಳೆಯಾಗಿ ಕಂಡದ್ದು ಗೌರವದಿಂದ ಸಮಾನತೆ ನೀಡಿ ಸಮಾಜದಲ್ಲಿರುವ ಸ್ತ್ರೀ ವಿಮೋಚನಾ ಹೋರಾಟವನ್ನು ಪ್ರಾರಂಭಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ವಿರಕ್ತ ಮಠದ ಪೀಠಾಧಿಪತಿ ಶ್ರೀ ಬಸವಪ್ರಭು ಸ್ವಾಮೀಜಿಯವರು ಹೇಳಿದರು.

ದಾವಣಗೆರೆ ನಗರದಲ್ಲಿ ಆಯೋಜಿಸಲಾಗಿದ್ದ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ, ಅದರ ಕಲ್ಪನೆ ವಿಷಯ ಕುರಿತು ಮಾತನಾಡಿದ ಅವರು ಶತ ಶತಮಾನಗಳಿಂದ ಈ ಸಮಾಜ ವ್ಯವಸ್ಥೆಯಲ್ಲಿ ಹೆಣ್ಣನ್ನು ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳಿಂದ ದೂರವಿಡಲಾಗಿತ್ತು. ಪುರುಷನಾಗಿ ಹುಟ್ಟಿ ಬಂದಾಗಲೇ ಆಕೆಗೆ ಮುಕ್ತಿ ಸಾಧ್ಯವೆಂದು ನಂಬಿಸಲಾಗಿತ್ತು. ಹೆಣ್ಣು ಮಕ್ಕಳನ್ನು ಪುರುಷರ ಗುಲಾಮರನ್ನಾಗಿಸಿದ ಕಾಲದಲ್ಲಿ ಬಸವಣ್ಣ ಹೆಣ್ಣಿಗಿದ್ದ ಎಲ್ಲ ಸಂಕೋಲೆಗಳನ್ನು ತೆಗೆದೊಗೆದು ಸ್ತ್ರೀಯರಿಗೆ ಸರ್ವ ಸಮಾನತೆ, ಸ್ವಾತಂತ್ರವನ್ನು ನೀಡಿದರು ಎಂದು ಹೇಳಿದರು.

ಮಹಿಳೆಯರಲ್ಲಿ ಬೌದ್ಧಿಕ, ರಾಜಕೀಯ, ಸಾಮಾಜಿಕ, ಆರ್ಥಿಕ ಬಲವನ್ನು ಹೆಚ್ಚಿಸುವುದೇ ಮಹಿಳಾ ಸಬಲೀಕರಣ. ಸಬಲೀಕರಣ ಎನ್ನುವುದು ಮಹಿಳೆಯರಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸಿ ಅವರ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಹಿಳೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಬೇಕಾಗಿದೆ. ಸ್ವತಂತ್ರ ಭಾರತದಲ್ಲಿ ಸಂಪೂರ್ಣವಾದ ಸ್ವಾತಂತ್ರ್ಯ ಮಹಿಳೆಯರಿಗೆ ನೀಡಬೇಕು. 12ನೇ ಶತಮಾನದ ಲ್ಲಿ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸಂಪೂರ್ಣವಾದ ಸ್ವಾತಂತ್ರವನ್ನು ಬಸವಣ್ಣನವರು ನೀಡಿದ್ದರು.21ನೇ ಶತಮಾನದಲ್ಲಿ ಇನ್ನು ಸಂಪೂರ್ಣವಾದ ಸ್ತ್ರೀ ಸ್ವಾತಂತ್ರ್ಯವನ್ನು ನೀಡುವುದು ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಮಕಾಲಿನ ಸಂಧರ್ಭದಲ್ಲಿಯೂ ಮಹಿಳೆಯರನ್ನು ಕೀಳಾಗಿ ಕಾಣುವ ಪ್ರೌವೃತ್ತಿ ನಿಲ್ಲಬೇಕು. ಗಂಡು ಹುಟ್ಟಿದಾಗ ಸಂಭ್ರಮಪಡುವ ಜನರು ಇಂದಿಗೂ ಇದ್ದಾರೆ. ಈ ತಾರತಮ್ಯ ನಿಲ್ಲಬೇಕು. ಹೆಣ್ಣು ಹುಟ್ಟಿದಾಗಲು ಸಂಭ್ರಮ ಪಡಬೇಕು ಸಿಹಿ ಹಂಚಬೇಕು. ಏಕೆಂದರೆ ಈಗಿನ ಕಾಲದಲ್ಲಿ ಎಷ್ಟೋ ಜನರಿಗೆ ಸಂತಾನ ಇಲ್ಲವಾಗಿದೆ ಎಂದರು.

ವೇದಿಕೆಯಲ್ಲಿ
ಜಯಮ್ಮ ಗೋಪಿನಾಯ್ಕ
ಸವಿತಾಬಾಯಿ ಮಲ್ಲೇಶನಾಯ್ಕ್
ಡಾ.ಎನ್.ಮಮತ
ಜಿ.ಬಿ.ಪ್ರಸಿದ್ಧ ಇದ್ದರು.

ಶಿವಶಕ್ತಿ ಬಸವ ಕಲಾ ಲೋಕದವರು ವಚನ ಸಂಗೀತ ಗಾಯನ ನಡೆಸಿಕೊಟ್ಟರು.
ಅನುರಾಧ ನಿರೂಪಿಸಿದರು,
ಆಶಾ ಸ್ವಾಗತಿಸಿದರು. ರುದ್ರಾಕ್ಷಿಬಾಯಿ ಶರಣು ಸಮರ್ಪಿಸಿದರು.

Leave a Reply

Your email address will not be published. Required fields are marked *

error: Content is protected !!