ಭತ್ತ ನೀರು ಪಾಲು, ಏರಲಿದೆ ಭತ್ತದ ದರ.!?

ದಾವಣಗೆರೆ : ಜಿಲ್ಲೆಯಾದ್ಯಂತ ಭತ್ತದ ಬೆಳೆ ಮಳೆ ಕಾರಣ ನೀರು ಪಾಲಾಗಿದ್ದು, ಇಳುವರಿ ಕಡಿಮೆಯಾಗಿದೆ.
ಇತ್ತ ಇರುವ ಭತ್ತವನ್ನು ರೈತ ಕಟಾವು ಮಾಡಿ ಬಿಸಿಲಿಗೆ ಒಣಗಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಕೋವಿಡ್ ಲಾಕ್‌ಡೌನ್‌ನಿಂದ ಉಂಟಾಗಿದ್ದ ಮಾರುಕಟ್ಟೆ ಸಮಸ್ಯೆ, ಪ್ರವಾಹ ಮತ್ತು ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ರೈತರು ಈಗ ಅಕಾಲಿಕ ಮಳೆಯಿಂದಾಗಿ ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಆನಗೋಡು, ದಾವಣಗೆರೆ, ಮಲೆಬೆನ್ನೂರು, ಹರಿಹರ ಹೀಗೆ ಇಡೀ ಜಿಲ್ಲೆಯಾದ್ಯಾಂತ ಭತ್ತ ತನ್ನದೇ ಆದ ಸ್ಥಾನ ಪಡೆದಿದ್ದು, ಈ ಭಾಗದಲ್ಲಿ ಭತ್ತವನ್ನು ಬೆಳೆಯುತ್ತಾರೆ. ಆದರೆ ಕೊಯ್ಲಿನ ಸಮಯಕ್ಕೇ ಮಳೆಯಾದ ಕಾರಣ ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಕೊಯ್ಲು ಮಾಡಿದ್ದ ಭತ್ತವನ್ನು ಜಮೀನುಗಳಲ್ಲೇ ಬಣವೆ (ಮೆದೆ) ಹಾಕಿದ್ದರು. ಕೆಲವೆಡೆ ಕೊಯ್ಲು ಮಾಡಿ ಒಣಗಲು ಗದ್ದೆಯಲ್ಲಿ ಬಿಟ್ಟಿದ್ದ ಭತ್ತ ನೀರುಪಾಲಾಗಿದೆ. ನೀರು ಇಂಗುವವರೆಗೆ ಹಾಗೂ ಹುಲ್ಲು ಒಣಗುವವರೆಗೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಕೃಷಿ ಇಲಾಖೆ ಮಾಹಿತಿ ಪ್ರಕಾರ, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಇದೆ. ಬಹುತೇಕ ಭತ್ತ ಕೊಯ್ಲಿಗೆ ಬಾಕಿ ಇದೆ. ಈ ಪೈಕಿ ನೂರಾರು ಎಕರೆ ಬೆಳೆ ಹಾನಿಯಾಗಿದೆ. ಮತ್ತೆ ಮಳೆ ಮುಂದುವರಿದರೆ ಭತ್ತದ ಕೊಯ್ಲು, ರಾಶಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಕೊಯ್ಲು ಮಾಡಿದ ಭತ್ತ ಜಮೀನಿನಲ್ಲೇ ಮೊಳಕೆ ಬರುವ ಸಾಧ್ಯತೆಯೂ ಇದೆ ಎನ್ನುತ್ತಾರೆ ರೈತರು.
ಈ ಎಲ್ಲ ಕಾರಣಗಳಿಂದ ಅಕ್ಕಿ ಬೆಲೆ ಏರಿಕೆಯಾಗುವ ಸಂಭವ ಇದೆ.
ಇನ್ನೊಂದೆಡೆ ದಲ್ಲಾಳಿಗಳು ಭತ್ತ ದರ ಹೆಚ್ಚಾಗುತ್ತದೆ ಎಂದು ಈಗಲೇ ರೈತರ ಹೊಲಕ್ಕೆ ಹೋಗಿ ಭತ್ತ ಖರೀದಿಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ..
ಎಕರೆ ಭತ್ತಕ್ಕೆ ಸುಮಾರು ಮೂವತ್ತು ಸಾವಿರ ಖರ್ಚು ಮಾಡಲಾಗಿದ್ದು, ಎಕರೆಗೆ ಇಪ್ಪತ್ತೈದು ಚೀಲ ಭತ್ತ ಆಗಬೇಕಿತ್ತು. ಆದರೀಗ ಎಕರೆಗೆ ಹತ್ತು ಚೀಲ ಆಗೋದು ಡೌಟು, ಎನ್ನುತ್ತಾರೆ ರೈತರು.
ಅಲ್ಲದೇ ಮಳೆಯಿಂದ ಭತ್ತ ಮೊಳೆಕೆಯೊಡುತ್ತಿದೆ.ಈ ಎಲ್ಲ ಕಾರಣಗಳಿಂದ ಭತ್ತದ ದರ ಹೆಚ್ಚಾಗುವ ಸಾಧ್ಯತೆ ಇದ್ದು, ಅಕ್ಕಿ ದರವೂ ಕೂಡ ಏರಿಕೆಯಾಗಲಿದೆ.
ದರ ಹೆಚ್ಚಳ;
ಭತ್ತದ ದರ ಈಗ ಕ್ವಿಂಟಾಲ್ ಗೆ 1800 ರೂ.ದರ ಏರಿದೆ. ಬೆಂಬಲ ಬೆಲೆ ದರಕ್ಕಿಂತ ಹೆಚ್ಚು ಬೆಲೆಯಲ್ಲಿ ದಲ್ಲಾಳಿಗಳು ಭತ್ತ ಕೊಳ್ಳುತ್ತಿದ್ದಾರೆ.