Bear Attack Farmers || ಕರಡಿ ದಾಳಿಯಿಂದ ರೈತರ ಜೀವ ಉಳಿಸಿ : ಕಿಸಾನ್ ಕಾಂಗ್ರೆಸ್ ಪ್ರವೀಣ್ ಕುಮಾರ್

ಜಗಳೂರು : ತಾಲ್ಲೂಕಿನ ಅಣಬೂರು ಹಾಗೂ ಸುತ್ತಮುತ್ತ ಗ್ರಾಮಗಳ ಲ್ಲಿ ಕರಡಿ ದಾಳಿ ಹೆಚ್ಚಾಗುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಕುಮಾರ್ ತಿಳಿಸಿದರು. ಕಳೆದ 1 ತಿಂಗಳಲ್ಲಿ ಮೂವರು ರೈತರ ಮೇಲೆ ಕರಡಿ ದಾಳಿ ನಡೆಸಿದೆ ಸದ್ಯ ಯಾವುದೇ ಪ್ರಾಣಾಪಯ ಆಗಿಲ್ಲ, ಅನಾಹುತ ಆಗುವ ಮುನ್ನವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಕರಡಿ ದಾಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ, ಅರಣ ಪ್ರದೇಶ ಸುತ್ತ ತಂತಿ ಬೇಲಿ ಹಾಕುವ ಮೂಲಕ ಕರಡಿ ದಾಳಿ ಕಡಿಮೆ ಮಾಡಬೇಕಿದೆ ಎಂದರು. ಇತ್ತೀಚೆಗೆ ಕರಡಿಗಳುಈ ಗ್ರಾಮಗಳ ಸುತ್ತಮುತ್ತ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ಬೋನ್ ಅಥವಾ ಇತರ ಪರ್ಯಾಯ ಮಾರ್ಗದಲ್ಲಿ ಕರಡಿ ಹಿಡಿದು ಬೇರೆಡೆಗೆ ಸ್ಥಳಾಂತರ ಮಾಡಬೇಕಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು.
ಇನ್ನೂ ಬೆಸ್ಕಾಂ ಇಲಾಖೆ ರಾತ್ರಿ ವೇಳೆ ಥ್ರಿ ಫೇಸ್ ವಿದ್ಯುತ್ ನೀಡುವುದರಿಂದ ರೈತರು ಅನಿವಾರ್ಯವಾಘಿ ಮೋಟರ್ ಚಾಲನೆಗೆ ಮತ್ತು ಕೃಷಿಗೆ ತಮ್ಮ ಜಮೀನುಗಳಿಗೆ ಹೋಗುತ್ತಾರೆ. ಇಂಥ ಸಂದರ್ಭದಲ್ಲಿಯೂ ಕರಡಿಗಳು ದಾಳಿ ಮಾಡುತ್ತಿವೆ ಎಂದರು. ಈ ಕಾರಣ ಅದಷ್ಟು ಬೆಳಗ್ಗೆ ಥ್ರಿ ಫೇಸ್ ವಿದ್ಯುತ್ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಪ್ರವೀಣ್ ಕುಮಾರ್ ತಿಳಿಸಿದರು. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಂಡು ಈಗಾಗಲೇ ಕರಡಿ ದಾಳಿಗೊಳಗಾದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಕಿಸಾನ್ ಕಾಂಗ್ರೆಸ್ ಜಿಲ್ಲಾ ಪ್ರ. ಕಾರ್ಯದರ್ಶಿ ಪ್ರವೀಣ್ ಕುಮಾರ್ ಎಸ್ ಆಗ್ರಹಿಸಿದ್ದಾರೆ.
ಕರಡಿ ದಾಳಿ ನಿಲ್ಲಿಸಲು ವಿಫಲವಾದರೆ ಅರಣ್ಯ ಇಲಾಖೆ, ಬೆಸ್ಕಾಂ ಇಲಾಖೆಯೇ ನೇರ ಹೊಣೆಯಾಗಬೇಕಾಗುತ್ತದೆ, ಈ ಬಗ್ಗೆ ಬೀದಿಗಿಳಿದು ಕಿಸಾನ್ ಕಾಂಗ್ರೆಸ್ ಹೋರಾಟ ಮಾಡಬೇಕಾಗುತ್ತದೆ ಎಂದರು.