ಅವಧಿ ಮೀರಿದ ಬಿಯರ್ ನಾಶಪಡಿಸಿದ ಅಬಕಾರಿ ಇಲಾಖೆ
ದಾವಣಗೆರೆ ದಾವಣಗೆರೆ ಕೆಎಸ್‍ಬಿಸಿಎಲ್ ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ಬಾಕಿ ಉಳಿದಿರುವ ಅವಧಿ ಮೀರಿದ ಹಾಗೂ ಮಾನವನ ಸೇವನೆಗೆ ಯೋಗ್ಯವಲ್ಲದ ವಿವಿಧ ಮಾದರಿಯ ಹಾಗೂ ವಿವಿಧ ಪ್ರಮಾಣದ 293 ಪೆಟ್ಟಿಗೆ 53 ಬಾಟಲ್ (2,450 ಲೀ.) ಬಿಯರ್ ಅನ್ನು ಗುರುವಾರದಂದು ಅಬಕಾರಿ ಉಪ ಆಯುಕ್ತ ಬಿ.ಶಿವಪ್ರಕಾಶ್ ಹಾಗೂ ಅಬಕಾರಿ ಉಪ ಅಧೀಕ್ಷಕ ಕೆ.ಎಲ.ನಾಗರಾಜ್ ಇವರುಗಳ ನೇತೃತ್ವದಲ್ಲಿ ಡಿಪೋ ಆವರಣದಲ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಿಯಮಾನುಸಾರ ನಾಶಪಡಿಸಲಾಯಿತು.
ಈ ವೇಳೆ ದಾವಣಗೆರೆ ವಲಯ ನಂ.01 ಮತ್ತು 02ರ ಅಬಕಾರಿ ನಿರೀಕ್ಷಕರು, ಕೆ.ಎಸ್.ಬಿ.ಸಿ.ಎಲ್ ಡಿಪೋ ಅಬಕಾರಿ ನಿರೀಕ್ಷಕರು ಮತ್ತು ವ್ಯವಸ್ಥಾಪಕರು, ಸಿಬ್ಬಂದಿಗಳು ಹಾಗೂ ಪಂಚರ ಸಮಕ್ಷಮ ನಿಯಮಾನುಸಾರ ನಾಶಪಡಿಸಲಾಯಿತು. ಬಿಯರ್ ದಾಸ್ತಾನಿನ ಅಂದಾಜು ಮೌಲ್ಯ 7,47,000 ರೂ.ಗಳಾಗಿರುತ್ತದೆ ಎಂದು ಡೆಪ್ಯೂಟಿ ಕಮೀಷನರ್ ಆಫ್ ಎಕ್ಸೈಜ್ ಬಿ.ಶಿವಪ್ರಕಾಶ್ ತಿಳಿಸಿದ್ದಾರೆ.