ಕೇವಲ 15ದಿನದಲ್ಲೇ ಬೆಂಗಳೂರು-ಮೈಸೂರು ದಶಪಥ ಟೋಲ್ ದರ ಹೆಚ್ಚಳ
ರಾಮನಗರ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಟೋಲ್ ದರವನ್ನು 15 ದಿನದಲ್ಲೇ ಏರಿಕೆ ಮಾಡಲಾಗಿದೆ.
ನಾಳೆಯಿಂದಲೇ (ಏಪ್ರಿಲ್ 1) ಈ ಪರಿಷ್ಕೃತ ದರವು ಜಾರಿಗೆ ಬರಲಿದೆ. ಕಾರ್, ವ್ಯಾನ್, ಜೀಪ್‌ಗಳ ಏಕಮುಖ ಟೋಲ್ ಅನ್ನು 135ರಿಂದ 165 ರೂ.ಗೆಏರಿಸಲಾಗಿದೆ. ದ್ವಿಮುಖ ಸಂಚಾರ ದರವು 205ರಿಂದ 250 ರೂ.ಗಳಿಗೆ ಏರಿಕೆಗೊಂಡಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಟೋಲ್ 220ರಿಂದ 270ಕ್ಕೆ ಹಾಗೂ ದ್ವಿಮುಖ ಸಂಚಾರಕ್ಕೆ 405 ( 75 ಹೆಚ್ಚಳ) ನಿಗದಿ ಆಗಿದೆ.
ಟ್ರಕ್, ಬಸ್, ಎರಡು ಆಕ್ಸೆಲ್ ವಾಹನಗಳ ಏಕಮುಖ ಟೋಲ್ ಬರೋಬ್ಬರಿ 565ಕ್ಕೆ ಏರಿಕೆ ಆಗಿದೆ ( 105 ಹೆಚ್ಚಳ). ದ್ವಿಮುಖ ಸಂಚಾರಕ್ಕೆ 850 ನಿಗದಿಪಡಿಸಲಾಗಿದೆ ( 160 ಹೆಚ್ಚಳ).
3 ಆಕ್ಸೆಲ್ ವಾಣಿಜ್ಯ ವಾಹನಗಳ ಏಕಮುಖ ಸಂಚಾರ ದರವು 615 (115 ಏರಿಕೆ) ಹಾಗೂ ದ್ವಿಮುಖ ಸಂಚಾರಕ್ಕೆ 925 (225 ಹೆಚ್ಚಳ) ಏರಿದೆ. ಭಾರಿ ವಾಹನಗಳ ಏಕಮುಖ ಟೋಲ್ 885 (165 ಹೆಚ್ಚಳ), ದ್ವಿಮುಖ ಸಂಚಾರಕ್ಕೆ 1,330 (250 ಹೆಚ್ಚಳ) ನಿಗದಿ ಆಗಿದೆ. 7 ಅಥವಾ ಅದಕ್ಕಿಂತ ಹೆಚ್ಚಿನ ಆಕ್ಸೆಲ್ ವಾಹನಗಳ ದರವು 1,080 (200 ಹೆಚ್ಚಳ) ಹಾಗೂ ದ್ವಿಮುಖ ಸಂಚಾರಕ್ಕೆ 1,620 (305 ಏರಿಕೆ) ನಿಗದಿ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಇದೇ ಮಾರ್ಚ್ 12ರಂದು ಈ ಹೆದ್ದಾರಿಯನ್ನು ಉದ್ಘಾಟಿಸಿದ್ದರು. ಮಾ. 14ರಿಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಣಮಿಣಕಿ ಹಾಗೂ ರಾಮನಗರ ತಾಲ್ಲೂಕಿನ ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ಟೋಲ್ ಸಂಗ್ರಹ ಆರಂಭಗೊಂಡಿತ್ತು.