ಬೆಂಜ್ ಕಾರ್ ನಲ್ಲಿ ಬಂದು‌ ಮರಳು ವ್ಯಾಪರಸ್ಥರಿಂದ ಹಣ ವಸೂಲಿ.! ಇಮ್ರಾನ್ ಸಿದ್ದೀಕಿ ( ಐ ಎಸ್ ) ಬಂಧನ.! ಆರೋಪಿತರಿಂದ 75 ಲಕ್ಷ ವಶಕ್ಕೆ ಪಡೆದ ಎಸ್ ಪಿ ರಿಷ್ಯಂತ್ ತಂಡ

Sand mafiya matka king pin imran siddiqee arrested by Davanagere sp Ryshyanth

Garudavoice Exclusive

ದಾವಣಗೆರೆ: ದಾವಣಗೆರೆ ನಗರದ ಮರಳು‌ ವ್ಯಾಪಾರಿ ಮುಬಾರಕ್ Sand Businessman ಎಂಬುವವರು ನೀಡಿದ ದೂರಿನಡಿ Complaint ಮೈಸೂರು ಮೂಲದ ವ್ಯಕ್ತ ಹಾಗೂ ಚಿತ್ರದುರ್ಗ ಮೂಲದ ಓರ್ವ ವ್ಯಕ್ತಿಯನ್ನು Davanagere SP CB Ryshyanth ದಾವಣಗೆರೆ ಎಸ್ ಪಿ ರಿಷ್ಯಂತ್ ನೇತೃತ್ವದ ಡಿ ಸಿ ಆರ್ ಬಿ ತಂಡ DCRB TEAM ಬಂಧಿಸಿ 75 ಲಕ್ಷ 70 ಸಾವಿರ ಹಣವನ್ನು ವಶಪಡಿಸಿಕೊಂಡಿದೆ.

ಮುಬಾರಕ್ ಎಂಬುವವರು ನೀಡಿದ ಪ್ರಕಾರ ಕಾನೂನು ಬದ್ಧವಾಗಿ ಪರ್ಮಿಟ್ ಪಡೆದು ಮರಳು ವ್ಯಾಪಾರವನ್ನು ಮಾಡುತ್ತಿದ್ದು, ನನಗೆ ನೀನು ಅಕ್ರಮವಾಗಿ ಮರಳು ದಂಧೆಯನ್ನು Illigal sand mining ಮಾಡುತ್ತಿದ್ದೀಯಾ ನಮಗೆ ನೀನು ಪ್ರತಿ ತಿಂಗಳು 4 ಲಕ್ಷ ಹಣವನ್ನು ನೀಡು ಇಲ್ಲವಾದಲ್ಲಿ ನೀನು ಮರಳು ದಂಧೆಯನ್ನು ಹೇಗೆ ಮಾಡುತ್ತೀಯಾ ಎಂದು ಬೆದರಿಕೆ ಹಾಕಿ ಹಣ ಮಸೂಲಿ ಮಾಡಿಕೊಂಡಿರುತ್ತಾರೆ ಅಂತಾ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಠಾಣಾ ಗುನ್ನೆ ನಂಬರ್ 143/22 ಕಲಂ 420, 384, 34 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆಯನ್ನ ಕೈಗೊಳ್ಳಲಾಗಿದೆ.

ಇಮ್ರಾನ್ ಸಿದ್ದೀಕಿ ಬಗ್ಗೆ ಗರುಡವಾಯ್ಸ್ ಈ ಹಿಂದೆ ಸುದ್ದಿ ಬಿತ್ತರಿಸಿತ್ತು..

ಸದರಿ ಪ್ರಕರಣದ ಆರೋಪಿತರನ್ನು ಪತ್ತೆ ಮಾಡಲು ಮಾನ್ಯ ಪೊಲೀಸ್ ಅಧೀಕ್ಷಕರವರು ದಾವಣಗೆರೆ ಜಿಲ್ಲೆ ರವರು ಶ್ರೀ ರು. ಎಸ್. ಬಸವರಾಜ್‌, ಪೊಲೀಸ್ ಉಪಾಧೀಕ್ಷಕರು ಡಿಸಿಆರ್‌ಬಿ ಘಟಕ, ಶ್ರೀ ಮಿಥುನ್, ಹೆಚ್.ಎನ್, ಐಪಿಎಸ್ (ಪ್ರೊಬೆಷನರಿ) ಶ್ರೀ ಲಿಂಗನಗೌಡ ನೆಗಳೂರು ಪಿ.ಐ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿದ್ದು, ಸದರಿ ತಂಡವು ಮೇಲ್ಕಂಡ ಪ್ರಕರಣದಲ್ಲಿ ಆರೋಪಿತರಾದ Imran Siddiqee ಮೈಸೂರು ಮೂಲದ ‘ಇಮ್ರಾನ್ ಸಿದ್ದೀಕಿ’ ಅವರಿಂದ 75 ಲಕ್ಷ ನಗದು ಹಣ 02 ಮೊಬೈಲ್, ಹಾಗೂ Ashok Jymmy ಚಿತ್ರದುರ್ಗ Chitradurga ಮೂಲದ ‘ಆಶೋಕ ಅಲಿಯಾಸ್ ಜಿಮ್ಮಿ’ ಇವರಿಂದ 70 ಸಾವಿರ ನಗದು ಹಣ ಸೇರಿ ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ.

                 ಇಮ್ರಾನ್ ಸಿದ್ದೀಕಿ ಹಾಗೂ ಸುನೀಲ್

ಆರೋಪಿತರು ಮರಳು ದಂಧೆ ಮಾಡುವವರ ಬಳಿ ಸಂಗ್ರಹಿಸಿದ್ದ ಒಟ್ಟು 75,70,000/- (ಎಪ್ಪತ್ತೈದು ಲಕ್ಷದ ಎಪ್ಪತ್ತು ಸಾವಿರ) ನಗದು ಹಣ, 02 ಮೊಬೈಲ್‌ ಫೋನ್‌ಗಳನ್ನು ಅಮಾನತ್ತು ಪಡಿಸಿಕೊಂಡಿದ್ದು, ತನಿಖೆ ಮುಂದುವರೆದಿರುತ್ತದೆ ಎಂದು ದಾವಣಗೆರೆ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸದರಿ ಪ್ರಕರಣದಲ್ಲಿ ಶ್ರೀ.ಐ.ಎಸ್.ಬಸವರಾಜ್ ಪೊಲೀಸ್ ಉಪಾಧೀಕ್ಷಕರು, ಡಿಸಿಆರ್‌ಬಿ ಘಟಕ, ಶ್ರೀ ವಿಥುನ್ ಐಪಿಎಸ್ (ಪ್ರಭೋಷನರಿ), ಶ್ರೀ ಲಿಂಗನಗೌಡ ನೆಗಳೂರು, ಪಿಐ, ದಾವಣಗೆರೆ ಗ್ರಾಮಾಂತರ, ಹಾಗೂ ಡಿಸಿಆರ್‌ಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಎಂ, ಅಂಜಿನಪ್ಪ ಎಎಸ್‌ಐ, ಕೆ.ಸಿ ಮಜೀದ್, ಕೆ.ಆಂಜನೇಯ, ಡಿ.ರಾಘವೇಂದ್ರ ಯು.ಮಾರುತಿ, ಪಿ.ಸುರೇಶ್, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ ಗುರುಶಾಂತಯ್ಯ, ಶ್ರೀ ಅರುಣಕುಮಾರ್, ಭಾಗಿಯಾಗಿರುತ್ತಾರೆ. ಇವರ ಕಾರ್ಯವನ್ನು ಶ್ರೀ ಸಿಬಿ ರಿಷ್ಯಂತ್ ಮಾನ್ಯ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ, ದಾವಣಗೆರ ಹಾಗೂ ಹೆಚ್ಚುವರಿ ಎಸ್‌ಪಿ ದಾವಣಗೆರೆಯವರು ಶ್ಲಾಘಿಸಿರುತ್ತಾರೆ.

garudavoice21@gmail.com. 9740365719

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!