BESCOM Recruitment; 400 ಹುದ್ದೆ, ಬೆಂಗಳೂರಿನಲ್ಲಿ ಕೆಲಸ
ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) 400 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ, ಅರ್ಹರಿಂದ ಅರ್ಜಿಗಳನ್ನು ಕರೆದಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಡಿಸೆಂಬರ್ 31 ಕೊನೆಯ ದಿನವಾಗಿದೆ.
ಬೆಸ್ಕಾಂ ಅಪ್ರೆಂಟಿಸ್ ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ. ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್ 8000 ರೂ. ನೀಡಲಾಗುತ್ತದೆ. ಆಸಕ್ತರು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರ:
- ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜನಿಯರಿಂಗ್) – 143 ಹುದ್ದೆ
- ಗ್ರಾಜುಯೇಟ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್) – 116 ಹುದ್ದೆ
- ಗ್ರಾಜುಯೇಟ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್) – 36 ಹುದ್ದೆ
- ಗ್ರಾಜುಯೇಟ್ ಅಪ್ರೆಂಟಿಸ್ (ಇನ್ಫರ್ಮೇಶನ್ ಸೈನ್ಸ್ & ಇಂಜನಿಯರಿಂಗ್) – 20 ಹುದ್ದೆ
- ಗ್ರಾಜುಯೇಟ್ ಅಪ್ರೆಂಟಿಸ್ (ಸಿವಿಲ್ ಇಂಜಿನಿಯರಿಂಗ್) – 5 ಹುದ್ದೆ
- ಗ್ರಾಜುಯೇಟ್ ಅಪ್ರೆಂಟಿಸ್ (Instrumentation Technology Engineering) – 5 ಹುದ್ದೆ
- ಟೆಕ್ನಿನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್) – 55 ಹುದ್ದೆ
- ಟೆಕ್ನಿನಿಷಿಯನ್ ಅಪ್ರೆಂಟಿಸ್ (ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್) – 10 ಹುದ್ದೆ
- ಟೆಕ್ನಿನಿಷಿಯನ್ ಅಪ್ರೆಂಟಿಸ್ (ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್) – 10 ಹುದ್ದೆ
ವಿದ್ಯಾರ್ಹತೆ:
- ಎಲ್ಲಾ ಗ್ರಾಜುಯೇಟ್ ಅಪ್ರೆಂಟಿಸ್ ತರಬೇತಿಗೆ – ಬಿಇ/ ಬಿಟೆಕ್ ವಿದ್ಯಾರ್ಹತೆ
- ಟೆಕ್ನಿನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ – ಡಿಪ್ಲೊಮಾ ವಿದ್ಯಾರ್ಹತೆ
ವಯೋಮಿತಿ/ಶುಲ್ಕ/ನೇಮಕಾತಿ:
ಬೆಸ್ಕಾಂ ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷಗಳು. ನೇಮಕಾತಿ ನಿಯಮದಂತೆ ವಯೋಮತಿ ಸಡಿಲಿಕೆ ಇರುತ್ತದೆ. ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ. ಮೆರಿಟ್ ಲಿಸ್ಟ್ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಆಸಕ್ತ ಮತ್ತು ಅರ್ಹರು ವೆಬ್ಸೈಟ್ಗೆ ಭೇಟಿ ನೀಡಿ ಸರಿಯಾದ ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ. ಬಳಿಕ ಅರ್ಜಿ ಭರ್ತಿ ಮಾಡಿ, ಕೇಳಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ಕಾರ್ಯ:
Bangalore Electricity Supply Company Limited, HRD Centre,
1st Floor, Crescent Tower, Crescent Road,
Near Mallige Nursing home, Race Course,
Bangalore-560001
8 ಜನವರಿ 2024 ರಂದು ಶಾರ್ಟ್ಲಿಸ್ಟ್ ಪ್ರಕಟವಾಗಲಿದೆ. ಬಳಿಕ ಜನವರಿ 22 ರಿಂದ 24ರ ತನಕ ಸಾಮಾನ್ಯ ಕರ್ತವ್ಯದ ದಿನಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯಲಿದೆ.
ಅರ್ಜಿಗಳನ್ನು ಸಲ್ಲಿಕೆ ಮಾಡಲು ವಿಳಾಸ: https://nats.education.gov.in/
ಬೆಸ್ಕಾಂ ವೆಬ್ಸೈಟ್ ವಿಳಾಸ: bescom.org
ಹೆಚ್ಚಿನ ಮಾಹಿತಿಗಾಗಿ: 044-22542235, 080-22356756 ಸಂಖ್ಯೆಗೆ ಕರೆ ಮಾಡಬಹುದು ಅಥವ dgmhrd.work@gmail.com ವಿಳಾಸಕ್ಕೆ ಇ-ಮೇಲ್ ಮಾಡಬಹುದು.