ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ವೆಂಕಟೇಶ್ ಬಾಬು

ದಾವಣಗೆರೆ : ಉತ್ತಮ ಶಿಕ್ಷಕರಿಂದ ಉತ್ತಮ ಸಮಾಜದ ನಿರ್ಮಾಣ ಸಾಧ್ಯ ಶಿಕ್ಷಕರು ದಿನಮಾನಗಳಲ್ಲಿ ಆಗುತ್ತಿರುವ ಬದಲಾವಣೆಗೆ ಒಗ್ಗಿ ತಾವು ಬದಲಾದರೆ ಉತ್ತಮ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡಿ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಬಹುದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವೆಂಕಟೇಶ್ ಬಾಬು ರವರು ಹೇಳಿದರು .ಅವರು ಇಂದು ನಗರದ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯ ಮತ್ತು ವಿನ್ನರ್ಸ್ ಕರಿಯರ ಅಕಾಡೆಮಿ ವತಿಯಿಂದ ಪ್ರಶಿಕ್ಷಣ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನಿಗೂ ಯಶಸ್ಸು ಬೇಕು ಆದರೆ ಯಶಸ್ಸು ಹೇಗೆ ಬೇಕೆಂಬುದನ್ನು ಮನುಷ್ಯ ನಿರ್ಧರಿಸಬೇಕು ನಿರಂತರ ಪ್ರಯತ್ನದಿಂದ ಯಶಸ್ಸು ಸಾಧ್ಯ ಯಶಸ್ಸು ಪಡೆಯಲು ಪ್ರತಿಯೊಬ್ಬರು ಗುರಿ ಆತ್ಮವಿಶ್ವಾಸ ಪ್ರಯತ್ನ ಛಲದಿಂದ ಪ್ರಯತ್ನ ಪಟ್ಟರೆ ಅದು ಸಿಗುತ್ತದೆ ಅಂತಹ ಯಶಸ್ಸು ತುಂಬಾ ದಿನಗಳ ಕಾಲ ಇರುತ್ತದೆ ಎಂದು ಹೇಳಿದರು. ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನ ಪಟ್ಟರೆ ನೀವು ಕೂಡ ಸಮಾಜದಲ್ಲಿ ಉತ್ತಮರಾಗಿ ಬದುಕಲು ಹಾಗೂ ಉತ್ತಮ ನಾಗರಿಕರನ್ನು ಸೃಷ್ಟಿಸುವಲ್ಲಿ ಪಾತ್ರರಾಗಬಹುದು ಎಂದು ಹೇಳಿದರು. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ ಹಾಗೂ ದೇಶವನ್ನು ಸಮಾಜವನ್ನು ಒಳ್ಳೆಯ ರೀತಿಯಿಂದ ಕಟ್ಟುವ ಮಹೋನ್ನತ ವೃತ್ತಿ ಅದನ್ನು ಗೌರವಿಸಬೇಕು ಎಂದು ಅಭ್ಯರ್ಥಿಗಳಿಗೆ ಹೇಳಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಪ್ರಾಚಾರ್ಯರಾದ ಡಾ ನಾಗರಾಜ ನಾಯ್ಕ ರವರು ಮಾತನಾಡುತ್ತಾ ಪ್ರತಿಯೊಬ್ರು ಸ್ಪರ್ಧಾತ್ಮಕ ಯುಗದಲ್ಲಿ ಧನಾತ್ಮಕ ಚಿಂತನೆಗಳನ್ನು ಮೈಗೂಡಿಸಬೇಕು ಧನಾತ್ಮಕ ಚಿಂತನೆಗಳಿಂದ ಉತ್ತಮ ಫಲಿತಾಂಶ ಸಿಗುತ್ತದೆ ನಕರಾತ್ಮಕ ದ ಕಡೆಗೆ ಹೋಗದೆ ಒಳ್ಳೆ ದಾರಿಯಲ್ಲಿ ಸಾಗಬೇಕು ಧರ್ಮದಿಂದ ಜಯ ಸಾಧ್ಯ ಅಧರ್ಮದಿಂದ ಸೋಲು ಕಟ್ಟಿಟ್ಟ ಬುತ್ತಿ ಈ ಮಾತುಗಳನ್ನು ವಿದ್ಯಾರ್ಥಿಗಳು ಸದಾ ನೆನಪಿಟ್ಟುಕೊಂಡರೆ ತಮ್ಮ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಉದ್ಯೋಗಾಧಿಕಾರಿ ರಾಮಚಂದ್ರಪ್ಪನವರು ವಿನ್ನರ್ಸ್ ಸಂಸ್ಥೆಯ ಮಂಜುನಾಥ ಹಾಗೂ ಉಮೇಶ್ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಎಲ್ಲಾ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು