ಭಾರಿ ಮಳೆಗೆ ದಾವಣಗೆರೆ ತಾಲ್ಲೂಕಿನಲ್ಲಿ 12 ಕಚ್ಚಾಮನೆ ಭಾಗಶಃ ಹಾನಿ 3.60 ಲಕ್ಷ ಅಂದಾಜು ನಷ್ಟ

ದಾವಣಗೆರೆ: ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಅಂದಾಜು 3.60 ಲಕ್ಷ ರೂ., ನಷ್ಟ ಸಂಭವಿಸಿದೆ
ಜಿಲ್ಲೆಯಲ್ಲಿ 5.83 ಮಿ.ಮೀ ಸರಾಸರಿ ಮಳೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ
ಚನ್ನಗಿರಿ ತಾಲ್ಲೂಕಿನಲ್ಲಿ 5.00 ಮಿ.ಮೀ ಸರಾಸರಿ ವಾಸ್ತವ ಮಾಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಸರಾಸರಿ 21.00 ಮಿ,ಮೀ, ಹರಿಹರ ತಾಲ್ಲೂಕಿನಲ್ಲಿ ಸರಾಸರಿ 3.00 ಮಿ.ಮೀ, ಹೊನ್ನಾಳಿ ತಾಲ್ಲೂಕಿನಲ್ಲಿ ಸರಾಸರಿ 3.00 ಮಿ.ಮೀ,ಜಗಳೂರು ತಾಲ್ಲೂಕಿನಲ್ಲಿ ಸರಾಸರಿ 2.00 ಮಿ.ಮೀ, ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ ಸರಾಸರಿ 1.00 ಮಿ.ಮೀ. ವಾಸ್ತವ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 12 ಕಚ್ಚಾಮನೆ ಭಾಗಶಃ ಹಾನಿಯಾಗಿದ್ದು, 3.60 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಸರ್ಕಾರದ ಮಾರ್ಗಸೂಚಿಯನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.