Bhadra Water: ಜುಲೈ 21 ರ ಮಧ್ಯರಾತ್ರಿಯಿಂದ ಬಲದಂಡೆ ನಾಲೆಗೆ 120 ದಿನ ನೀರು ಹರಿಸಲು ನಿರ್ಣಯ

ದಾವಣಗೆರೆ: (Bhadra Water) ಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ ಮುಂಗಾರು ಮಳೆಗಾಲದ ಭತ್ತದ ಬೆಳೆಗೆ ನೀರು ಹರಿಸಲು ಸನ್ಮಾನ್ಯ ಶ್ರೀ ಮಧು ಬಂಗಾರಪ್ಪ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಶಿವಮೊಗ್ಗ ಜಿಲ್ಲೆ ಮಾನ್ಯ ಅಧ್ಯಕ್ಷರು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ಯಲ್ಲಿ ಮಲವಗೊಪ್ಪ ಶಿವಮೊಗ್ಗ ಕಚೇರಿಯಲ್ಲಿ ಸಭೆ ನಡೆಸಲಾಯಿತು.
ಜುಲೈ 21 ರ ಮಧ್ಯರಾತ್ರಿ ಬಲದಂಡೆ ನಾಲೆಗೆ 120 ದಿನ ನೀರು ಹರಿಸಬೇಕೆಂದು ಸರ್ವಾನುಮತದ ನಿರ್ಣಯ ಮಾಡಲಾಗಿದೆ.
ಸಭೆಯಲ್ಲಿ ಭದ್ರಾ ಆಡಳಿತಾಧಿಕಾರಿ , ಮಾನ್ಯ ಡಾ.k p ಅಂಶುಮಂತ್ ಅಧ್ಯಕ್ಷರು ಭದ್ರಾ ಕಾಡ ಪ್ರಾಧಿಕಾರ, ಹೊನ್ನಾಳಿ ಶಾಸಕರಾದ ಶಾಂತನಗೌಡ ,B p ಹರೀಶ್ ಹರಿಹರ ಶಾಸಕರು, ಬಸವಂತಪ್ಪ ಶಾಸಕರು ಮಾಯಕೊಂಡ, ಶ್ರೀಮತಿ ಲತಾ ಮಲ್ಲಿಕಾರ್ಜುನ ಹರಪನಹಳ್ಳಿ ಶಾಸಕರು, ಹೆಚ್ ಆರ್ ಲಿಂಗರಾಜ್ ಶಾಮನೂರು ಅಧ್ಯಕ್ಷರು ಭಾರತೀಯ ರೈತ ಒಕ್ಕೂಟ ದಾವಣಗೆರೆ ಜಿಲ್ಲಾ, ತೇಜಸ್ವಿ ಪಟೇಲ್, ಎ ಎಂ ಮಂಜುನಾಥ್, ಶಿರಮಗೊಂಡನಳ್ಳಿ , ಮಹೇಶ್ ಕುಂದುವಾಡ, ಕರಿಬಸಪ್ಪ , ಕೃಷಿ ಅಧಿಕಾರಿಗಳು ನೀರಾವರಿ ಅಧಿಕಾರಿಗಳು ಭಾಗವಹಿಸಿದ್ದರು.