ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಭದ್ರಾವತಿ ಮಹಿಳೆ!

ದಾವಣಗೆರೆ: ಒಂದು ಮಗುವಿಗೆ ಜನ್ಮ ನೀಡುವುದೇ ಕಷ್ಟ ಇರುವ ಈಗಿನ ಪರಿಸ್ಥಿತಿಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಭದ್ರಾವತಿ ತಾಲೂಕಿನ ತಡಸಾ ಗ್ರಾಮದ ಆರೀಫ್ ಎಂಬುವರ ಪತ್ನಿ ಅಲ್ಮಾಜ್‌ಬಾನು ಅವರು ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಹೆರಿಗೆಯಾದ ಎರಡು ಹೆಣ್ಣು, ಎರಡು ಗಂಡು ಮಕ್ಕಳು ಹಾಗೂ ತಾಯಿ ಆರೋಗ್ಯದಿಂದ ಇದ್ದು, ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವ ಪ್ರಕರಣಗಳು ವಿರಳ ಎಂಬುದು ವೈದ್ಯರ ಅಭಿಪ್ರಾಯವಾಗಿದೆ. 5.12ಲಕ್ಷ ಜನರಲ್ಲಿ ಒಬ್ಬರು ಈ ರೀತಿ ನಾಲ್ಕು ಮಕ್ಕಳಿಗೆ ಜನ್ಮ ನೀಡುತ್ತಾರೆ ಎನ್ನಲಾಗಿದೆ.
garudavoice21@gmail.com 9740365719