ಭಾನುವಾರ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಲು ಶಂಕರಯ್ಯ ಮಠಪತಿ ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಚುನಾವಣೆ ಭಾನುವಾರ ನಡೆಯಲಿದ್ದು, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಶಿರುವ ಶಂಕರಯ್ಯ ರಾಚಯ್ಯ ಮಠಪತಿ ಸಂಘದ ಶ್ರೇಯೋಭಿವೃದ್ದಿಗೆ ತಮಗೆ ಮತ ನೀಡಿ ಗೆಲ್ಲಿಸುವಂತೆ ತೆರಿಗೆ ಸಲಹೆಗಾರರ ಸಂಘದ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.
ಕಳೆದ 30 ವರ್ಷಗಳಿಂದ ಅವಿರೋಧವಾಗಿ ಆಯ್ಕೆ ನಡೆಯುತ್ತಿದ್ದ ಸಂಘಕ್ಕೆ ಇದೇ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿರುವುದರಿಂದ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.
ಸಂಘದ ಆರಂಭದ ಕಾಲದಿಂದಲೂ ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತ ಬಂದಿರುವ ಶಂಕರಯ್ಯ ರಾಚಯ್ಯ ಮಠಪತಿಯವರು ತೆರಿಗೆ ಸಾಹಿತ್ಯವನ್ನು ಕನ್ನಡ ಭಾಷೆಯಲ್ಲಿ ಪ್ರಕಟಿಸುತ್ತ ಗ್ರಾಮೀಣ ಭಾಗದ ತೆರಿಗೆ ಸಲಹೆ ವೃತ್ತಿನಿರತರಿಗೆ ಅನುಕೂಲವಾಗುವಂತೆ ಮಾಡುತ್ತ ಬಂದಿದ್ದು, ಸಂಘದ ಚಟುವಟಿಕೆಗಳಲ್ಲಿ ಯಾವುದೇ ಗುಂಪುಗಾರಿಕೆ ರಾಜಕೀಯ ಲೇಪವಿಲ್ಲದೆ ಸೇವಾ ರೂಪದಲ್ಲಿ ಕಾರ್ಯ ನಿರ್ವಹಿಸುತ್ತ ಸಂಘದ ಯಶಸ್ಸಿಗೆ ಶ್ರಮಿಸಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಮುಂದಿನ ದಿನಗಳಲ್ಲಿ ತೆರಿಗೆ ಸಲಹೆಗಾರರಿಗೆ ಆತ್ಮನಿರ್ಭರ ಭಾರತ ಕೌಶಲ್ಯಾಭಿವೃದ್ದಿಯ ಪರಿಕಲ್ಪನೆ ಅಡಿಯಲ್ಲಿ ಜಾಯಿಂಟ್ ಸರ್ಟಿಫಿಕೇಟ್ ಮೂಲಕ ಚಾರ್ಟೆಡ್ ಟ್ಯಾಕ್ಸ್ ಪ್ರ್ಯಾಕ್ಟಿಷನರ್ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಆರಂಭಿಸಲು ಶ್ರಮಿಸುವುದಾಗಿ ತಿಳಿಸಿದ್ದಾರೆ.
ತೆರಿಗೆ ಸಲಹೆಗಾರರು ಪರಾವಲಂಬಿಗಳಾಗದೇ ಸ್ವಾವಲಂಬಿಗಳಾಗಲು ಜಿಎಸ್ ಟಿ 9ಸಿ ಆಡಿಟ್ ಹಕ್ಕನ್ನು ಜಿಎಸ್ ಟಿಪಿ ಪರೀಕ್ಷೆ ಪಾಸಾದವರಿಗೆ ದೊರೆಯುವಂತೆ ಮಾಡುವುದು. ಜಿಎಸ್ ಟಿ ಸಲಹೆಗಾರರಿಗೆ ಅವಶ್ಯವಿರುವ ಆನ್ ಲೈನ್ ಪರೀಕ್ಷೆ ಹಕ್ಕು ಐಸಿಟಿಪಿಐಗೆ ದೊರೆಯುವಂತೆ ಮಾಡುವುದು. ಹಾಗೂ ಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಕಾನೂನು ವಿಷಯ ಒದಗಿಸುವುದರ ಜೊತೆಗೆ ಜಿಲ್ಲಾ ಮತ್ತು ರಾಜ್ಯ ಸಂಘಟನೆಯ ಸದಸ್ಯರ ನಡುವೆ ಸೌಹಾರ್ದ ವಾತಾವರಣ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.