ಯುವತಿಯ ಭರ್ಬರ ಹತ್ಯೆ ಪ್ರಕರಣ.! ಕೊಲೆ ಮಾಡಿದ್ದ ಭಗ್ನ ಪ್ರೇಮಿ ಚಿಕಿತ್ಸೆ ಫಲಿಸದೇ ಸಾವು.!

Murder accused lady

ದಾವಣಗೆರೆ: ಪ್ರಿತೀಸಿದ್ದ  ಯುವತಿ ಬೇರೆಯವರ ಜೊತೆ ನಿಶ್ಚಿತಾರ್ಥ ಆಗಿದ್ದಕ್ಕೆ ಮನನೊಂದು ಹಾಡಹಗಲೇ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಯುವಕ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ಗುರುವಾರ  ದಾವಣಗೆರೆಯಲ್ಲಿ ನಡೆದಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯುವಕನೂ ಮೃತಪಟ್ಟಿದ್ದಾನೆ.

ಯುವತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಸಾದತ್ ಅಲಿಯಾಸ್ ಚಂದ್ ಪೀರ್ (29) ಎಂದು ಗುರುತಿಸಲಾಗಿತ್ತು. ಗುರುವಾರ ದಾವಣಗೆರೆಯ ನಗರದ ಪಿಜೆ ಬಡಾವಣೆಯ ಚರ್ಚ್ ಬಳಿಯಲ್ಲಿ  ಯುವತಿ ಚಾಂದ್ ಸುಲ್ತಾನಳನ್ನು ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಿದ್ದ. ಬಳಿಕ ತಾನೂ ನಗರದ ಹೊರವಲಯದಲ್ಲಿ ಯಾವುದೋ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ.

ವಿಚಾರ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಯುವಕನನ್ನು ದಾವಣಗೆರೆ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾದತ್ ಸಾವನ್ನಪ್ಪಿದ್ದಾನೆ.

ಮಾಹಿತಿಯಂತೆ ಸಾದತ್ ಹಾಗೂ ಸಂಬಂದಿಗಳಾಗಿದ್ರು, ಆತ ಚಾಂದ್ ಸುಲ್ತಾನಾಳನ್ನು ಪ್ರೀತಿಸುತ್ತಿದ್ದು, ಆಕೆಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆಯ ಪೊಷಕರು ಆತನ ಪ್ರೀತಿಯನ್ನು ನಿರಾಕರಿಸಿದ್ದು ಮಾತ್ರವಲ್ಲದೇ ಆಕೆಯ ಕುಟುಂಬದ ಸದಸ್ಯರು ಆಕೆಗೆ ಮತ್ತೊಂದು ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದ ಸಾದತ್ ಕೋಪಗೊಂಡಿದ್ದ.

ಮದುವೆ ನಿಶ್ಚಯವಾಗಿದ್ದ ಯುವತಿಯನ್ನು ಹಾಡಹಗಲೇ ದುಷ್ಕರ್ಮಿಯೊಬ್ಬ ಹರಿತವಾದ ಆಯುಧದಿಂದ ಚುಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗುರುವಾರ ನಗರದ ಪಿಜೆ ಬಡಾವಣೆಯಲ್ಲಿ ನಡೆದಿತ್ತು. ಚಾಂದ್ ಸುಲ್ತಾನ(28)ಹತ್ಯೆಗೀಡಾದ ಯುವತಿ.

ಹರಿತವಾದ ಆಯುಧದಿಂದ ಹತ್ತಾರು ಬಾರಿ ಮನಸೋಇಚ್ಛೆ ಇರಿದು ಕೊಲೆ ಮಾಡಿ ಬೈಕಿನಲ್ಲಿ ಪರಾರಿಯಾಗುವ ದೃಶ್ಯ ಸಿಸಿ ಟಿವಿಯಲ್ಲಿ ಸಂಪೂರ್ಣ ದಾಖಲಾಗಿದೆ. ಮೃತ ಮಹಿಳೆ ವಿನೋಬನಗರದ ವಾಸಿಯಾಗಿದ್ದು, ನಗರದ ಮುಸ್ಲಿಂ ಹಾಸ್ಟೆಲ್‌ನಲ್ಲಿರುವ ಕಚೇರಿಯೊಂದರಲ್ಲಿ ಆಡಿಟಿಂಗ್ ಕೆಲಸ ಮಾಡುತ್ತಿದ್ದರು. ಹರಿಹರದ ಅಯೂಬ್ ಎಂಬ ಯುವಕನ ಜೊತೆ ಇತ್ತೀಗಷ್ಟೇ ಈಕೆಯ ಮದುವೆ ನಿಶ್ಚಯವಾಗಿತ್ತು. ಆದರೆ ಇದ್ದಕ್ಕಿಂದಂತೆ ಗುರುವಾರ ಬೆಳಿಗ್ಗೆ ಯುವತಿಯನ್ನು ಕೊಲೆ ಗೈಯಲಾಗಿತ್ತು.

ಚಾಂದ್ ಸುಲ್ತಾನ್ ಅವರು ತನ್ನ (ಕೆಎ 17 ಈಎಸ್ 2632) ಬಿಳಿ ಬಣ್ಣದ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದರು. ಈ ವೇಳೆ ಬಂದಿರುವ ಹಂತಕ ಆಕೆಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಆಕೆ ಸ್ವಲ್ಪ ಪ್ರತಿರೋಧ ತೋರುತ್ತಿದ್ದಂತೆಯೆ ಹಂತಕ ಚಾಕುವಿನ ಇರಿತವನ್ನು ಮತ್ತಷ್ಟು ಚುರುಕುಗೊಳಿಸಿ ಮನಬಂದಂತೆ ಚುಚ್ಚಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡ ಮಹಿಳೆ ಸ್ಥಳದಲ್ಲಿಯೇ ನರಳುತ್ತಾ ಕೊನೆಯುಸಿರೆಳೆದಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!