Big Impact: ಸುದ್ದಿ ಬಿತ್ತರಿಸಿದ 24 ಗಂಟೆಯಲ್ಲಿ ನಿದ್ರೆಯಿಂದ ಎದ್ದ ಇಲಾಖೆ.! ರಸ್ತೆ ದುರಸ್ತಿ ಮಾಡಿಸಿ ಶಹಬ್ಬಾಸ್ ಗಿರಿ ಪಡೆದ ಇಂಜಿನಿಯರ್ಸ್ – ಗರುಡವಾಯ್ಸ್ ಫಲಶೃತಿ

ದಾವಣಗೆರೆ:ನಗರದ ಎಂಸಿಸಿ ಎ ಬ್ಲಾಕ್ ನಲ್ಲಿರುವ ಸಂಜೀವಿನಿ ಆಸ್ಪತ್ರೆಯ ಮುಂಭಾಗ ಭೂಮಿ ಕುಸಿದು ಪಾದಚಾರಿಗಳಿಗೆ, ವಾಹನಸವಾರರಿಗೆ ತೊಂದರೆಯುಂಟು ಮಾಡಿದ್ದರು ಸಹ ಸಂಬಂಧಪಟ್ಟ ಇಲಾಖೆಯವರು ಕ್ಯಾರೆ ಎಂದಿರಲಿಲ್ಲ. ಆದರೆ, ನಮ್ಮ ‘ಗರುಡಾವಾಯ್ಸ್’ ಈ ಬಗ್ಗೆ ಸುದ್ದಿ ಬಿತ್ತರಿಸಿದ 24 ತಾಸುಗಳಲ್ಲಿಯೇ ನಿದ್ದೆಯಲ್ಲಿದ್ದ ಇಲಖೆ ಎಚ್ಚೆತ್ತುಕೊಂಡು ರಸ್ತೆ ದುರಸ್ತಿ ಮಾಡಿದೆ.
ಆಸ್ಪತ್ರೆಯ ಮುಂಭಾಗವೇ ಸುಮಾರು ಒಂದೆರಡು ಅಡಿಯಷ್ಟು ಭೂಮಿ ಕುಸಿತ ಕಂಡಿತ್ತು. ಆಸ್ಪತ್ರೆಗೆ ಬರುವ ರೋಗಿಗಳಿಗೆ ಮತ್ತು ರೋಗಿಗಳ ಕಡೆಯವರಿಗೆ ಈ ರಸ್ತೆ ದುರಾವಸ್ತೆಯಿಂದ ಸಾಕಷ್ಟು ತೊಂದರೆಯೂ ಆಗಿತ್ತು. ಆದರೆ ಇದ್ಯಾವುದರ ಪರಿವೇಯೇ ಇಲ್ಲದಂತೆ ಸಂಬಂಧಪಟ್ಟ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ, ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮದಡಿ ರಸ್ತೆ, ನೀರಿನ ಪೈಪ್ ಲೈನ್ ದುರಸ್ತಿಗೊಳಿಸಬೇಕಾದ ಅಧಿಕಾರಿ ವರ್ಗದವರು ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಮೈಮರೆತಿದ್ದರು.
ಗರುಡಾವಾಯ್ಸ್ ಸುದ್ದಿಬಿತ್ತರಿಸಿ ಬಿಸಿ ಮುಟ್ಟಿಸುತ್ತಿದ್ದಂತೆ ಇಲಾಖೆಯವರು ಎಚ್ಚೆತ್ತುಕೊಂಡು ರಸ್ತೆಯನ್ನು ದುರಸ್ತಿ ಮಾಡಿದ್ದು, ಗರುಡಾವಾಯ್ಸ್ ಕಳಕಳಿಗೆ ಸಾರ್ವಜನಿಕರು ಹರುಷ ವ್ಯಕ್ತಪಡಿಸಿದ್ದಾರೆ.