ಫೆ.5ಕ್ಕೆ ಬಿಗ್ ಮಿಶ್ರಪೇಡಾ ಮಳಿಗೆ ಉದ್ಘಾಟನೆ.
ದಾವಣಗೆರೆ: ನಗರದ ಗಡಿಯಾರ ಕಂಬದ ಬಳಿಯ ಸಿವಿಡಿ ಕಾಂಪ್ಲೆಕ್ಸ್ ನಲ್ಲಿ ಬಿಗ್ ಮಿಶ್ರ ಪೇಡಾ, ಸಿಹಿ ಹಾಗೂ ಖಾರದ ತಿಂಡಿಯ ಮಳಿಗೆ ಶನಿವಾರ ಬೆಳಿಗ್ಗೆ 9 ಗಂಟೆಗೆ ಪೂಜಾ ಕಾರ್ಯಕ್ರಮದೊಂದಿಗೆ ಶುಭಾರಂಭಗೊಳ್ಳುತ್ತಿದೆ ಎಂದು ಬಿಗ್ ಮಿಶ್ರ ಧಾರವಾಡದ ವ್ಯವಹಾರಿಕ ಮುಖ್ಯಸ್ಥ ರಿತಿಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಈಗಾಗಲೇ 70 ಶಾಖೆಗಳಿದ್ದು, 180ಕ್ಕೂ ಹೆಚ್ಚು ಮಳಿಗೆಗಳು ಕಾರ್ಯ ನಿರ್ವಹಿಸುತ್ತಿದ್ದು, ದಾವಣಗೆರೆಯಲ್ಲಿ ಇದು 5ನೇ ಮಳಿಗೆಯಾಗಿದೆ. ಬಿಗ್ ಮಿಶ್ರಾ ಅಡಿ 400ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೀಗ ಹೊಸದಾಗಿ 6 ತಿಂಗಳ ಕಾಲ ಉತ್ಪನ್ನ ಕೆಡದಂತೆ ಶೇಖರಿಸಿಡುವಂತಹ 15ಕ್ಕೂ ಹೆಚ್ಚು ಎಂಎಪಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.
ಮಿಶ್ರಾ ಪೇಡಾಗೆ ತನ್ನದೆ ಆದ ವಿಶಿಷ್ಟತೆ ಇದ್ದು, ಮಹಾರಾಷ್ಟ್ರ, ಸೌತ್ ಕೆನರಾ, ಉತ್ತರ ಕರ್ನಾಟಕದಾದ್ಯಂತ ಮಾರುಕಟ್ಟೆ ಇದ್ದು, 2-3ವರ್ಷಗಳಲ್ಲಿ ವಿದೇಶಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದರು.
ಶುಭಾರಂಭಗೊಳ್ಳುವ ಮಳಿಗೆಯ ಫ್ರಾಂಚೈಸಿದಾರರಾದ ಸಮೀರ್ ಠಕ್ಕರ್ ಮಾತನಾಡಿ, ಮಳಿಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮೇಯರ್, ಎಸ್.ಟಿ.ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.