ಬೈಕ್ ಕಳ್ಳರ ಬಂಧಿಸಿದ ದಾವಣಗೆರೆ ಪೋಲಿಸ್ – 5 ಲಕ್ಷ ಮೌಲ್ಯದ 10 ಬೈಕ್ ವಶಕ್ಕೆ

ದಾವಣಗೆರೆ: ಬೈಕ್ ಕಳವು ಮಾಡುತ್ತಿದ್ದ ಇಬ್ಬರು ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಬಂಧಿತರಿಂದ ವಿವಿಧೆಡೆ ಕಳ್ಳತನ ಮಾಡಿದ್ದ 10 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಅವರ ಮಾರ್ಗದರ್ಶನದಲ್ಲಿ ಬಡಾವಣೆ ಪೊಲೀಸ್ ಪೊಲೀಸ್ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ಪಿ.ಎಸ್.ಐ ( ಕಾ.ಸು ) ಅರವಿಂದ ಬಿ.ಎಸ್ ಮತ್ತು ಪಿಎಸ್‌ಐ -2 ಚಿದಾನಂದಪ್ಪ ಎಸ್.ಬಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಬೈಕ್‌ಗಳ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿತರುಗಳನ್ನು ಬಂಧಿಸಿದ್ದು, 5.10 ಲಕ್ಷ ಮೌಲ್ಯದ ಹತ್ತು ಬೈಕ್ ಗಳನ್ನು ಜಪ್ತುಪಡಿಸಿಕೊಂಡಿದೆ.
ದಾವಣಗೆರೆ ಜಿಲ್ಲೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾದ 02 ಬೈಕ್ ಕಳವು ಪ್ರಕರಣಗಳು, ಹರಿಹರ ನಗರ ಪೊಲೀಸ್ ಠಾಣೆಯ 02 ಬೈಕ್ ಕಳವು ಪ್ರಕರಣಗಳು, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ 01 ಬೈಕ್ ಕಳವು ಪ್ರಕರಣ, ವಿದ್ಯಾನಗರ ಪೊಲೀಸ್ ಠಾಣೆಯ 01 ಬೈಕ್ ಕಳವು ಪ್ರಕರಣ, ಆರ್‌ಎಂಸಿ ಪೊಲೀಸ್ ಠಾಣೆ 01 ಬೈಕ್ ಕಳವು ಪ್ರಕರಣ, ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಪೊಲೀಸ್ ಠಾಣೆಯ 02 ಬೈಕ್ ಕಳವು ಪ್ರಕರಣಗಳು, ವಿಜಯನಗರ ಜಿಲ್ಲೆಯ ಅರಿಸೀಕೆರೆ ಪೊಲೀಸ್ ಠಾಣೆ 01 ಬೈಕ್ ಕಳವು ಪ್ರಕರಣ ಸೇರಿ ಒಟ್ಟು 10 ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿತರನ್ನು ಬಂಧಿಸಲಾಗಿದೆ.