ಪಾಲಿಕೆ ಜನನ-ಮರಣ ಪತ್ರ ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಲಿ

IMG-20211114-WA0168

ದಾವಣಗೆರೆ: ದಾವಣಗೆರೆ ಹೆಸರಿಗೆ ಮಾತ್ರ ಸ್ಮಾರ್ಟ್ ಸಿಟಿ ಆಗಿದ್ದು, ಅಧಿಕಾರಿಗಳು ಸಾರ್ವಜನಿಕರಿಗೆ ಸ್ಮಾರ್ಟ್ ವ್ಯವಸ್ಥೆ ಯಾವಾಗ ಮಾಡುತ್ತಾರೆ ಎಂಬುದು ಇನ್ನೂ ಅರ್ಥವಾಗುತ್ತಿಲ್ಲ.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಜನನ ಮರಣ ಪತ್ರ ವಿತರಣೆಗೆ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಅರ್ಜಿ ನೀಡುತ್ತಿರುವುದು ಒಂದು ದಿನದ ನಂತರ ಜನನ ಮರಣ ಪತ್ರ ಪಡೆಯುತ್ತಿರುವುದನ್ನು ನೋಡಿದರೆ ನಾವು ಇನ್ನು 1947 ರ ವ್ಯವಸ್ಥೆಯಲ್ಲಿ ಇದ್ದೀವಾ ಎಂಬ ಅನುಮಾನ ಬಾರದೇ ಇರದು.

ಪಾಲಿಕೆಯಿಂದ ಜನನ ಮರಣ ಪತ್ರ ಪಡೆಯಲು 10 ರೂ ಶುಲ್ಕ ನಿಗದಿ ಮಾಡಲಾಗಿದೆ ಎಂದು ಪಾಲಿಕೆ ಸದಸ್ಯರೊಬ್ಬರು ತಿಳಿಸುತ್ತಿದ್ದು, ಸಿಬ್ಬಂದಿ ಒಂದು ಪತ್ರಕ್ಕೆ 30 ರೂ ಹಣವನ್ನು ಸಾರ್ವಜನಿಕರಿಂದ ಪಡೆಯುತ್ತಿದ್ದಾರೆ, ಪ್ರತಿದಿನ ಸರಾಸರಿ ಸುಮಾರು 500 ಜನನ-ಮರಣ ಪ್ರತಿಗಳನ್ನು ಸಾರ್ವಜನಿಕರಿಗೆ ನೀಡಿದರೂ, ಸರ್ಕಾರದ ಆದಾಯ 500*10=5000
ಸಿಬ್ಬಂದಿ ಆದಾಯ
500*20=10000
ಅಂದರೆ ಸರ್ಕಾರಕ್ಕೆ ಬರುವ ಆದಾಯಕ್ಕಿಂತ ಸಿಬ್ಬಂದಿಗಳ ಆದಾಯವೇ ದ್ವಿಗುಣವಾಗಿದೆ ಇದರ ಬಗ್ಗೆ ಪಾಲಿಕೆಯ ಆಯುಕ್ತರಿಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ ಆಯುಕ್ತರು ಇದರ ಬಗ್ಗೆ ಗಮನ ಹರಿಸಬೇಕಾಗಿದೆ.

ಕೆಳಹಂತದ ಸಿಬ್ಬಂದಿಗಳು ನೆಪಮಾತ್ರಕ್ಕೆ ಇದ್ದು, ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ ಎಂದು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ.

ಇದು ಕೇವಲ ಜನನ ಮರಣ ಪತ್ರದ ಸ್ಥಿತಿ, ಇನ್ನು ಖಾತೆ ಬದಲಾವಣೆ, ಬಿಲ್ಡಿಂಗ್ ಲೈಸೆನ್ಸ್, ವಾಣಿಜ್ಯ ಮಳಿಗೆ ಲೈಸೆನ್ಸ್ ಮುಂತಾದವು ಬಗ್ಗೆ ಹೇಳುತ್ತಾ ಹೋದರೆ ಪಾಲಿಕೆ ಹಣದ ಕಜಾನೆ ಎಂಬುದು ಅರ್ಥವಾಗುತ್ತದೆ.

ಸಾರ್ವಜನಿಕರು ಒಂದಕ್ಕೆ ಎರಡು ಪಟ್ಟು ಹಣ ನೀಡಿದರು ಸಹ ತಮಗೆ ಬೇಕಾದ ಜನನ ಮರಣ ಪತ್ರ ಪಡೆಯಲು ದಿನಗಟ್ಟಲೇ ಕಾಯುವ ಸ್ಥಿತಿ ಮಾತ್ರ ವಿಪರ್ಯಾಸ.

ಪಾಲಿಕೆ ಜನನ-ಮರಣ ಪತ್ರವನ್ನು ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಿದರೆ ಸಾರ್ವಜನಿಕರ ಹಣ ಸಮಯ ಎರಡು ಉಳಿತಾಯವಾಗುವುದು ಆಗ ಮಾತ್ರ ನಗರವನ್ನು ಸ್ಮಾರ್ಟ್ ಸಿಟಿ ಎನ್ನಲು ಸಾಧ್ಯ ಅಲ್ಲವೇ????

*ಕೆ.ಎಲ್.ಹರೀಶ್ ಬಸಾಪುರ*

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!