ಬಿಟ್‌ಕಾಯಿನ್-ಹ್ಯಾಕಿಂಗ್ ಅಕ್ರಮ: ಅಂತಾರಾಷ್ಟ್ರೀಯ ಮಟ್ಟದ ಸಹಭಾಗಿತ್ವದಲ್ಲಿ ತನಿಖೆಗೆ ಆದೇಶ ಕೋರಿ ‘ಸಿಟಿಜನ್ ರೈಟ್ಸ್’ ಪಿಐಎಲ್
ಬೆಂಗಳೂರು: ಜಿಂದಾಲ್ ಭೂ ಅಕ್ರಮವನ್ನು ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ದು, ಜಮೀನು ಮಂಜೂರಾತಿ ಕ್ರಮವನ್ನೇ ಸ್ಥಗಿತಗೊಳಿಸುವಲ್ಲಿ ನಿರ್ಣಾಯಕ ಕಾನೂನು ಹೋರಾಟ ನಡೆಸಿದ್ದ ‘ಸಿಟಿಜನ್ ರೈಟ್ಸ್ ಫೌಂಡೇಷನ್ ಮುಖ್ಯಸ್ಥ ಕೆ.ಎ.ಪಾಲ್ ಇದೀಗ ಬಿಟ್ ಕಾಯಿನ್ ಅಕ್ರಮ ಹಾಗೂ ಹ್ಯಾಕಿಂಗ್ ಕರ್ಮಕಾಂಡದ ಬೆನ್ನತ್ತಿದ್ದಾರೆ.
ಜಾಗತಿಕ ಮಟ್ಟದಲ್ಲಿ ಹ್ಯಾಕಿಂಗ್ ದಂಧೆ ನಡೆದಿದ್ದು ಅಧಿಕಾರಿಗಳು ಹಾಗೂ ಕರ್ನಾಟಕದ ಕೆಲವು ಪ್ರಭಾವಿ ರಾಜಕಾರಣಿಗಳ ಶಾಮೀಲಾತಿ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಈ ಸಂಬಂಧ ವಿದೇಶಿ ತನಿಖಾ ಸಂಸ್ಥೆಗಳು ಮಾಹಿತಿ ಕಲೆಹಾಕುತ್ತಿರುವಾಗಲೇ, ಇತ್ತ ಹ್ಯಾಕರ್ ಶ್ರೀಕಿ ಪ್ರಕ್ರರಣ ಕುರಿತು ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಮುಖ್ಯಸ್ಥ ಕೆ.ಎ.ಪಾಲ್ ಅವರು ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಸಾಮಾಜಿಕ ಹೋರಾಟಗಾರರೂ ಆಗಿರುವ ಕೆ.ಎ.ಪಾಲ್, ವಿವಿಧ ಮಾಧ್ಯಮ ವರದಿಗಳನ್ನು ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯವರ ಗಮನಸೆಳೆದಿದ್ದಾರೆ.
*ಪಿಐಎಲ್ ನಲ್ಲಿರುವ ಪ್ರಮುಖ ಸಂಗತಿಗಳು:*
ಬಿಟ್ ಕಾಯಿನ್ ದಂಧೆಯಲ್ಲಿ *ಬಿಜೆಪಿಯ ಜೋಡಿ ನಾಯಕರು ಭಾಗಿಯಾಗಿದ್ದಾರೆ.*
ಬಿಟ್ ಕಾಯಿನ್ ಅಕ್ರಮ ಹಾಗೂ ಹ್ಯಾಕಿಂಗ್‌ನಲ್ಲಿ ಪೊಲೀಸರು ಹಾಗೂ ರಾಜಕಾರಣಿಗಳು ಶಾಮೀಲಾಗಿದ್ದಾರೆ.
ಅಕ್ರಮ ಹಣ ಹೂಡಿಕೆ ಆರೋಪವೂ ಇದೆ. *ಸರ್ಕಾರಿ ವೆಬ್‌ಸೈಟ್ ಹ್ಯಾಕ್ ಮಾಡಿದ್ದಲ್ಲದೆ, ಅಂತರಾಷ್ಟ್ರೀಯ ವೆಬ್‌ಸೈಟ್ ಹ್ಯಾಕಿಂಗ್* ಅಕ್ರಮವೂ ನಡೆದಿದೆ.
ಪೊಲೀಸರ ಸಹಾಯದಿಂದ *ಆರೋಪಿ ಶ್ರೀಕಿಯನ್ನು ರಕ್ಷಿಸಲಾಗುತ್ತಿದೆ* ಎಂಬ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿವೆ. ಹಾಗಾಗಿ, *ಈ ಬಗ್ಗೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎಜನ್ಸಿಗಳ ಸಹಭಾಗಿತ್ವದಲ್ಲಿ* ತನಿಖೆ ನಡೆಯಬೇಕಿದೆ.
*ನ್ಯಾಯಾಲಯದ ಪರಿವೀಕ್ಷಣೆಯಲ್ಲಿ ತನಿಖೆ ನಡೆಯಬೇಕಿದೆ.*
ಪ್ರತೀ ದಿನ ತನಿಖಾ ಪ್ರಗತಿ ಬಗ್ಗೆ ಮಾಹಿತಿ ಕಲೆಹಾಕಬೇಕಿದೆ. ಒಂದು ವೇಳೆ, ತನಿಖಾಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ವಿವರಣೆ ಪಡೆಯಬೇಕಿದೆ.
ಈ ಅಕ್ರಮಗಳ *ತನಿಖೆಗಾಗಿ ಕೇಂದ್ರ ಹಾಗೂ ರಾಜ್ಯದ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಬೇಕು.*
ಈಗಾಗಲೇ ಅಮೇರಿಕಾದ ತನಿಖಾ ಏಜೆನ್ಸಿಯಾಗಿರುವ *ಎಫ್‌ಬಿಐ ಈ ಬಗ್ಗೆ ತನಿಖೆಗೆ ಸಹಕರಿಸುವ ಇಂಗಿತವನ್ನು* ವ್ಯಕ್ತಪಡಿಸಿರುವುದು ಗೊತ್ತಾಗಿದೆ. ಒಂದು ವೇಳೆ ತನಗೆ ಅವಕಾಶ ಸಿಕ್ಕಿದಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ, ತಾನೇ ಖುದ್ದಾಗಿ ಗೌರವಾನ್ವಿತ ನ್ಯಾಯಾಲಯದ ಮುಂದೆ ವಾದ ಮಂಡಿಸಲು ಸಿದ್ದನಿದ್ದೇನೆ.
ಕೆ ಎ ಫಾಲ್ – ಚೇರ್ಮನ್, ‘ಸಿಟಿಜನ್ ರೈಟ್ಸ್ ಫೌಂಡೇಷನ್ ‘