ಈ ಬಿಜೆಪಿ ಸರ್ಕಾರದ ಸಮಿಶ್ರ ಸರ್ಕಾರ ಇದ್ದಂತೆ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಕ್ರೋಶ

ದಾವಣಗೆರೆ: ಬೋವಿ ಸಮುದಾಯಕ್ಕೆ ಸಚಿವ ಸಂಪುಟದಲ್ಲಿ ಯಾವುದೇ ಪ್ರಾತಿನಿಧ್ಯ ನೀಡದ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭೋವಿ ಪೀಠದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಸರ್ಕಾರ ಸರ್ವರಿಗೂ ಸಮಬಾಳು ಸಮಪಾಲು ಎನ್ನುವಂತೆ ಸಂವಿಧಾನದ ಆಶಯದಡಿ ಇರಬೇಕು.
ಬಿಜೆಪಿ ಸರ್ಕಾರದ ಸಚಿವ ಸಂಪುಟ, ಅನುಭವ ಮಂಟಪದ ರೀತಿ ಇರಬೇಕಿತ್ತು. ಎಲ್ಲ ಜಾತಿ ಜನಾಂಗದವರಿಗೂ ಪ್ರಾತಿನಿದ್ಯ ದೊರೆಯಬೇಕಿತ್ತು. ಆದರೆ, ಸರ್ಕಾರ ದೊಡ್ಡ ಸಮುದಾಯದ ಓಲೈಕೆ ಮಾಡುವಂತಿದೆ. ಆದ್ದರಿಂದ ಚಿಕ್ಕಚಿಕ್ಕ ಸಮುದಾಯಗಳಿಗೆ ಎಲ್ಲಿದೆ ಎನ್ನುವಂತಾಗಿದೆ ಎಂದು ಸ್ವಾಮೀಜಿ ಬೋವಿ ಸಮುದಾಯಕ್ಕೆ ಸ್ಥಾನ ನೀಡದ್ದಕ್ಕೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ.
ಇನ್ನು, ರಾಜ್ಯದ ಬಿಜೆಪಿ ಸರ್ಕಾರ ಕೂಡ ಸಮ್ಮಿಶ್ರ ಸರ್ಕಾರ ಇದ್ದಂತೆ ಎಂದಿರುವ ಸಿದ್ದರಾಮೇಶ್ವರ ಸ್ವಾಮೀಜಿಗಳು, ಸಂಪುಟದಲ್ಲಿ ಸಾಮಾಜಿಕ ನಾಯವೆಲ್ಲಿದೆ ,
ಈ ಸರ್ಕಾರ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಿಸೋಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಸಂಪುಟ ರಚನೆ ದೊಡ್ಡ ಸಮುದಾಯಗಳ ಓಲೈಕೆ ಕೆಲಸವಾಗಬಾರದು. ಇದು ಶಾಸಕರನ್ನ ಪಕ್ಷಾಂತರ ಮಾಡಿಕೊಂಡು ರಚನೆ ಮಾಡಿರುವ ಸರ್ಕಾರ. ಹೀಗಾಗಿ, ಬಿಜೆಪಿ ಮತ್ತು ಪಕ್ಷಾಂತರಿ ಶಾಸಕರು ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮತ್ತು ಇವರ ಸಂಕಟ ನಮಗೆ ಅರ್ಥವಾಗತ್ತೆ. ಆದರೂ ಕೂಡ ಸರ್ಕಾರ ಸರ್ವರನ್ನು ಒಳಗೊಳ್ಳುವ ಕೆಲಸ ಮಾಡಬೇಕು. ಆಗ ಮಾತ್ರ ಅದು ಸರ್ಕಾರ ಎನ್ನುತ್ತೇವೆ ಎಂದು ಹೇಳಿದ್ದಾರೆ.
ಇನ್ನು, ಇವು ರಾಷ್ಟ್ರೀಯ ಪಕ್ಷವಾಗಿದ್ದರಿಂದ ಮುಖ್ಯಮಂತ್ರಿಗಳ ವಿವೇಚನೆಯಿಂದಷ್ಟೆ ಏನು ನಡೆಯುವುದಿಲ್ಲ.
ಮುಖ್ಯಮಂತ್ರಿ ಮತ್ತು ನಿಕಟಪೂರ್ವ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದಡಿಯಲ್ಲಿ ಯೋಜನೆ ರೂಪಿಸಬೇಕು. ದೊಡ್ಡ ಸಮುದಾಯಗಳನ್ನ ಓಲೈಕೆ ಮಾಡುವ ಮೂಲಕ ಸಣ್ಣ ಸಮುದಾಯಗಳನ್ನ ಜೀವಂತ ಶವ ಮಾಡಿದ್ದಾರೆ. ಅದು ಆಗಬಾರದು ಎಲ್ಲರಿಗೂ ಸಮಾಜಿಕ ನ್ಯಾಯ ನೀಡಬೇಕು ಎಂದು ಸಿದ್ದರಾಮೇಶ್ವರ ಸ್ವಾಮೀಜಿ ಅಗ್ರಹಿಸಿದರೆ
