ಬಿಜೆಪಿ ಹಾಗೂ ಕಾಂಗ್ರೆಸ್ ರಾಜ್ಯಕ್ಕೆ ಮಾರಕ – ಹೆಚ್ ಡಿ ಕುಮಾರಸ್ವಾಮಿ

IMG-20210720-WA0020

 

ಬೆಂಗಳೂರು: ಜೆಡಿಎಸ್ ಬಿಟ್ಟು ಹೋದವರನ್ನು ಮತ್ತೆ ಪಕ್ಷಕ್ಕೆ ಆಹ್ವಾನಿಸುವ ಪ್ರಶ್ನೆಯೇ ಇಲ್ಲ. ಹೊಸ ಯುವಪಡೆಯೊಂದಿಗೆ ಪಕ್ಷವನ್ನು ಬಲಪಡಿಸುವ ಆಶಯವನ್ನು ಜೆಡಿಎಸ್ ಹೊಂದಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್ ನಲ್ಲಿ ಪಕ್ಷ ಬಿಟ್ಟು ಹೋದವರನ್ನು ಕರೆತರಲು ಸಭೆ ನಡೆಸಿರುವುದು ಮಾಧ್ಯಮಗಳಿಂದ ಬಹಿರಂಗವಾಗಿದೆ. ಆದರೆ, ಜೆಡಿಎಸ್ ಸಭೆ ನಡೆಸುತ್ತಿರುವುದು ಪ್ರಾದೇಶಿಕ ಪಕ್ಷವನ್ನು ಬಲಪಡಿಸಿ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಎಂದು ಸ್ಪಷ್ಟ ಪಡಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಹೋದವರು ಈಗಾಗಲೇ ಮಂತ್ರಿಗಳಾಗಿ ಎರಡು ವರ್ಷವಾಗಿದೆ. ಹಾಗಿದ್ದಮೇಲೆ ಅವರು ಅದೇ ಪಕ್ಷಕ್ಕೆ ಸೇರಿದವರು. ನಮ್ಮ ಪಕ್ಷದಲ್ಲಿವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಬಗ್ಗೆ ಯಾವುದೇ ಯೋಚನೆಯಿಲ್ಲ ಎಂದರು.

ಕಾಂಗ್ರೆಸ್ ಬಿಜೆಪಿ ಈ ಎರಡು ಪಕ್ಷಗಳು ರಾಜ್ಯಕ್ಕೆ ಮಾರಕವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ನ್ನು ಮತ್ತಷ್ಟು ಬಲಪಡಿಸಿ ಅಧಿಕಾರಕ್ಕೇರಿ ಜನರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ಕೊಟ್ಟರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!