ದಾವಣಗೆರೆಯ ಬಿಜೆಪಿ ಮುಖಂಡರಿಂದ ಖಾದಿ ಉದ್ಯಮಗಳನ್ನು ಪ್ರೋತ್ಸಾಹಿಸುವ ಸಂಕಲ್ಪ

ದಾವಣಗೆರೆ: ೭೫ ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಹಾಗು ಮಹಾತ್ಮ ಗಾಂಧೀಜಿ ಅವರ ೧೫೨ ನೇ ಜನ್ಮ ದಿನೋತ್ಸವ ಮತ್ತು ಮಹಾತ್ಮ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ೧೧೭ ನೇ ಜಯಂತೋತ್ಸವದ ಅಂಗವಾಗಿ ಬಿಜೆಪಿ ಮುಖಂಡರು ಖಾದಿ ಉದ್ಯಮಗಳನ್ನು ಪ್ರೋತ್ಸಾಹಿಸುವ ಸಂಕಲ್ಪ Φನಡೆಸಿದರು.
ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ನೇತೃತ್ವದಲ್ಲಿ ಮಾಜಿ ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾಮಿ ಮತ್ತು ಮಾಜಿ ಮಹಾಪೌರರಾದ ಸುಧಾ ಜಯರುದ್ರೇಶ್ ಅವರು ಖಾದಿ ಗ್ರಾಮ ಉದ್ಯೋಗ ಮಳಿಗೆಗಳಿಗೆ ಭೇಟಿ ನೀಡಿ, ಖಾದಿ ಉಡುಪುಗಳನ್ನ ಖರೀಸಿದರು ಮತ್ತು ಕಾರ್ಯಕರ್ತರಿಗೂ ಉಡುಗೊರೆಯಾಗಿ ನೀಡುವ ಮೂಲಕ ಖಾದಿ ಉದ್ಯಮವನ್ನು ಪ್ರೋತ್ಸಾಹಿಸುವ ಸಂಕಲ್ಪ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಪದ್ಮನಾಭ ಶೆಟ್ರು, ಕಿರಣ ಕುಮಾರ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವೆರ್ಣೇಕರ್, ಅನಿಲ್ ಜಯರಾಮ್, ವಿವೇಕ್ ಮತ್ತಿತರರು ಉಪಸ್ಥಿತರಿದ್ದರು