ಬಿಜೆಪಿ ಶಾಸಕ ಟಿ ರಾಜಾಸಿಂಗ್ ಬಂಧನ.! ಪಕ್ಷದಿಂದ ಅಮಾನತುಗೊಳಿಸಿ ಬಿಜೆಪಿ ಹೈಕಮಾಂಡ್ ಆದೇಶ.!
ತೆಲಂಗಾಣ: ಪ್ರವಾದಿ ಮಹಮದ್ ಪೈಗಂಬರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಟಿ ರಾಜ ಸಿಂಗ್ ಬಂಧನವಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಟಿ ರಾಜ ಸಿಂಗ್ ಅವರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದೆ.
ತೆಲಂಗಾಣದ ಘೋಶಾಮಾಲ್ ನ ಶಾಸಕ ರಾಜ ಸಿಂಗ್ ರಿಲೀಸ್ ಮಾಡಿದ ವಿಡಿಯೋ ಒಂದರಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಆಕ್ಷೇಪ ರ‍್ಹ ಪದ ಬಳಕೆ ಮಾಡಿದ್ದರು. ಇದರ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದಿದ್ದವು ಅಲ್ಲದೆ ಅವರ ವಿರುದ್ಧ ಕೇಸ್ ಕೂಡ ದಾಖಲಾಗಿತ್ತು. ರಾಜ ಸಿಂಗ್ ವಿರುದ್ಧ ಐಪಿಸಿಯ 295(ಎ) 153(ಎ) ಸೇರಿದಂತೆ ಹಲವು ಕೇಸ್ಗಳು ದಾಖಲಾಗಿದ್ದವು.
ಏನಿದು ಪ್ರಕರಣ ಅನ್ನೋದನ್ನ ನೋಡೋದಾದ್ರೆ. ಹೈದ್ರಾಬಾದ್ ನಲ್ಲಿ ಹಾಸ್ಯ ನಟ ಮುನ್ನಾವರ ಫಾರೂಕಿ ಕರ‍್ಯಕ್ರಮವನ್ನು ಆ ಯೋಜನೆ ಮಾಡಿದ್ದರು. ಆ ವೇಳೆ ರಾಜ ಸಿಂಗ್ ಪ್ರವಾದಿ ಮಹಮ್ಮದ್ ಪೈಗಂಬರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು ಬಳಿಕ ವಿಡಿಯೋ ಸಖತ್ ವೈರಲ್ ಆಗಿತ್ತು. ರಾಜ ಸಿಂಗ್ ಹೇಳಿಕೆಯ ವಿರುದ್ಧ ಅನೇಕ ಪ್ರತಿಭಟನೆಗಳು ನಡೆದಿದ್ದವು. ಇದಕ್ಕೆ ಸರ‍್ಥನೆ ಮಾಡಿಕೊಳ್ಳಲು ರಾಜಸಿಂಗ್ ಮುಂದಾಗಿದ್ದರು. ಆದರೆ ರಾಜಸಿಂಗ್ ಕಾಮಿಡಿಯಾಗಿ ಹೇಳಿಕೆ ನೀಡಿದ್ದಾರೆ ಅವರ ಬಂಧನವಾಗಬೇಕೆಂದು ಒತ್ತಡ ಹೆಚ್ಚಾಗಿತ್ತು ಅಲ್ಲದೆ ರಾಜಸಿಂಗ್ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಬಿಜೆಪಿ ಶಾಸಕ ರಾಜಸಿಂಗ್ ಅವರನ್ನು ಬಂಧಿಸಿದ್ದು ಬಳಿಕ ಬಿಜೆಪಿ ಹೈಕಮಾಂಡ್ ಪಕ್ಷದಿಂದ ರಾಜ ಸಿಂಗ್ ನನ್ನು ಅಮಾನತ್ತು ಮಾಡಬೇಕೆಂದು ಆದೇಶ ಹೊರಡಿಸಿದೆ.