ಬಿಜೆಪಿ ರಾಜ್ಯ ಕಾರ್ಯಕಾರಿಯಲ್ಲಿ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ ;: ಬಾಡದ ಆನಂದರಾಜು

IMG-20210917-WA0004

 

ದಾವಣಗೆರೆ: ನಗರದಲ್ಲಿ ಶನಿವಾರ ಮತ್ತು ಭಾನುವಾರ ನಡೆಯುತ್ತಿರುವ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಬರುವ ಎಲ್ಲಾ ನಾಯಕರಿಗೂ ಶೋಷಿತ ವರ್ಗ ಮತ್ತು ಯಾದವ ಸಮಾಜದಿಂದ ಸ್ವಾಗತ ಕೋರುತ್ತೇವೆ ಎಂದು ಜಿಲ್ಲಾಧ್ಯಕ್ಷರಾದ ಬಾಡಾ ಆನಂದರಾಜು ತಿಳಿಸಿದರು. ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ಆಂತರಿಕ ವಿಚಾರ ಮತ್ತು ಸಂಘಟನೆ ಬಗ್ಗೆ ಚರ್ಚೆ ನಡೆಯುವುದು ಸಾಮಾನ್ಯ. ಈ ಸಭೆ ವಿಶೇಷವಾಗಿ ನಡೆಯಬೇಕೆಂಬುದು ನನ್ನ ಆಶಯವಾಗಿದೆ ಎಂದರು. ಕೇವಲ ಪಕ್ಷದ ಸಂಘಟನೆಗೆ ಮಾತ್ರ ಈ ಸಭೆ ಸೀಮಿತವಾಗಬಾರದು ರಾಜ್ಯದ ಜನ ಸಾಮಾನ್ಯರ ಕಷ್ಟಗಳ ಬಗ್ಗೆ ಚರ್ಚೆ ನಡೆಯಬೇಕೆಂದರು. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಜನರು ಸಂಕಷ್ಟದಲ್ಲಿದ್ದಾರೆ ಪ್ರಸ್ತುತ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ಮಾಡುತ್ತಿದೆ. ಬಿಜೆಪಿ ಎಲ್ಲಾ ನಾಯಕರು ಸಭೆಯಲ್ಲಿ ಹಾಜರಾಗುತ್ತಿದ್ದು ನಾಡಿನ ಜನರ ಸಮಸ್ಯೆ ಪರಿಹಾರ ಬಗ್ಗೆಯೂ ಚರ್ಚೆ ನಡೆಯಬೇಕೆಂದರು.

ಪಕ್ಷದ ಸಂಘಟನೆ ಹೊರತು ಪಡಿಸಿ ಇಂಥ ಸಮಸ್ಯೆಗಳ ಬಗ್ಗೆ ಎಲ್ಲರೂ ಚರ್ಚೆ ಮಾಡಿದರೆ ನಿಜಕ್ಕೂ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಗೆ ಒಂದು ಅರ್ಥ ಬರುತ್ತದೆ. ಏಕೆಂದರೆ ಪ್ರತಿನಿತ್ಯ ಜನರು ಕಷ್ಟ ಅನುಭವಿಸುತ್ತಿದ್ದಾರೆ ಅದರಲ್ಲೂ ಕೂಲಿ ಕಾರ್ಮಿಕರು, ಬಡವರು ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಇಂಥ ಸಮಯದಲ್ಲಿ ಆಡಳಿತ ನಡೆಸುವ ಪಕ್ಷಗಳು ಜನರಿಗೆ ಅನುಕೂಲವಾಗುವಂತ ಕೆಲಸ ಮಾಡಬೇಕು, ರಾಜ್ಯ ಸರ್ಕಾರ ಬಡವರ ಸಂಕಷ್ಟಕ್ಕೆ ಸ್ಪಂದಿಸುವ ಕುರಿತು ಗಂಭೀರ ಚರ್ಚೆ ನಡೆಸಬೇಕೆಂದರು.

ದಾವಣಗೆರೆ ಸಂಸದರು ಹಾಗೂ ಕೇಂದ್ರ ಮಾಜಿ ಸಚಿವರಾದ ಜಿ.ಎಂ ಸಿದ್ಧೇಶ್ವರ ಅವರ ಮುಂದಾಳತ್ವದಲ್ಲಿ ದಾವಣಗೆರೆ ನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯುತ್ತಿರುವುದು ಇತಿಹಾಸವಾಗಿದೆ. ಈ ಕಾರ್ಯಕಾರಿಣಿ ಸಭೆ ಕೇವಲ ಪಕ್ಷದ ಹಿತದೃಷ್ಟಿಯಿಂದ ನಡೆಯದೇ ಜನರ ಸಮಸ್ಯೆಗಳ ಕುರಿತು ಬೆಳಕು ಚೆಲ್ಲಲಿ ಎಂದರು. ದಾವಣಗೆರೆ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮಗಳು ಮುಂದಿನ ಯಾವುದೇ ಕಾರ್ಯಕ್ರಮಕ್ಕೂ ಶುಭ ಸೂಚಕ ಈ ಹಿನ್ನೆಲೆ ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಹ ಒಂದು ಯಶಸ್ಸಿಗೆ ದಾರಿಯಾಗಲಿದೆ ಎಂದರು. ಉತ್ತಮ ಆಡಳಿತ ನಡೆಸುತ್ತಿರುವ ಬಿಜೆಪಿ ಮುಂದೆಯೂ ಅಧಿಕಾರಕ್ಕೆ ಬರಲಿ ಉತ್ತಮ ಆಡಳಿತ ನೀಡುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ ಎಂದು ಬಾಡದ ಆನಂದರಾಜು ತಿಳಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!